Thursday, June 4, 2026
Homeಕರಾವಳಿಮಂಗಳೂರುಕೋವಿಡ್ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಮೊದಲ ಪ್ರಯಾಣಿಕ ಹಡಗು

ಕೋವಿಡ್ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಮೊದಲ ಪ್ರಯಾಣಿಕ ಹಡಗು

- Advertisement -
- Advertisement -

ಮಂಗಳೂರು: ಕೋವಿಡ್ ಬಳಿಕ ಸ್ಥಗಿತಗೊಂಡಿದ್ದ ಲಕ್ಷದ್ವೀಪ – ಮಂಗಳೂರು ನಡುವಿನ ಹಡಗು ಸಂಚಾರ ಪುನರಾರಂಭಗೊಂಡಿದೆ.

ಇಂದು ಲಕ್ಷದ್ವೀಪದಿಂದ ಮಂಗಳೂರಿಗೆ ಪ್ರಯಾಣಿಕ ಹಡಗು ಆಗಮಿಸಿದೆ. ಕೋವಿಡ್ ಸೋಂಕಿನ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ ಮೊದಲ ಪ್ರಯಾಣಿಕ ಹಡಗು ಇದಾಗಿದೆ.

ಮಂಗಳೂರಿನ ಹಳೆ ಬಂದರಿಗೆ ಬಂದಿರುವ ಪರಾಳಿ ಹೆಸರಿನ ಹೈಸ್ಪೀಡ್ ಹಡಗಿನಲ್ಲಿ150 ಪ್ರಯಾಣಿಕರು ಆಗಮಿಸಿದ್ದು, ಏಳು ಗಂಟೆಗಳ ಪ್ರಯಾಣದಲ್ಲಿ ಲಕ್ಷದ್ವೀಪ ನಿವಾಸಿಗಳು ಮಂಗಳೂರಿಗೆ ತಲುಪಿದ್ದಾರೆ.

ಈ ಹಿಂದಿನ 24 ಗಂಟೆಗಳ ಕಾಲದ ಹಡಗು ಪ್ರಯಾಣ 7 ಗಂಟೆಗೆ ಇಳಿಕೆಯಾಗಿದೆ.

ಈ ಹಿಂದೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ಪ್ರಯಾಣದ ಅವಕಾಶ ಇತ್ತಲ್ಲದೇ ಕೋವಿಡ್ ಸೋಂಕಿನ ಬಳಿಕ ಹಡಗು ಸಂಚಾರ ಸ್ಥಗಿತಗೊಂಡಿತ್ತು.

ಸದ್ಯ ಲಕ್ಷದ್ವೀಪದ ನಿವಾಸಿಗಳಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಇದ್ದು, ಮುಂದೆ ಪ್ರವಾಸಿಗರಿಗೂ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳಲು ಅವಕಾಶ ಕಲ್ಪಿಸುವ ನಿರೀಕ್ಷೆ ಹೊಂದಲಾಗಿದೆ.

- Advertisement -

Latest News

error: Content is protected !!