ಅಫ್ಗಾನಿಸ್ತಾನ: ಅಫ್ಗಾನಿಸ್ತಾನದ ಜನಪ್ರಿಯ ಹಾಸ್ಯನಟ ನಜರ್ ಮೊಹಮ್ಮದ್ ಅವರನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕಂದಹಾರ್‌ನ ತನ್ನ ನಿವಾಸದ ಸಮೀಪದಲ್ಲೇ ನಜರ್ ಮೊಹಮ್ಮದ್ ಅವರನ್ನು ಹತ್ಯೆ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದು, ರಾತ್ರಿ ನಜರ್ ನಿವಾಸಕ್ಕೆ ಬಂದ ದುಷ್ಕರ್ಮಿಗಳು ನಜರ್ ಅವರನ್ನು ಕರೆದೊಯ್ದು ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ಹೇಳಲಾಗಿದೆ.
ನಜರ್ ಈ ಹಿಂದೆ ಸ್ಥಳಿಯ ಪೊಲೀಸರಿಗೆಸೇವೆ ಸಲ್ಲಿಸಿದ್ದರು ಎನ್ನುವ ಮಾಹಿತಿ ತಿಳಿದುಬಂದಿದ್ದು, ಉಗ್ರರು ನಜರ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಲಿಬಾನ್ ಉಗ್ರ ಸಂಘಟನೆ ನಜರ್ ಹತ್ಯೆ ಮಾಡಿದೆ ಎಂದು ನಜರ್ ಕುಟುಂಬದವರು ಆರೋಪಿಸಿದ್ದಾರೆ.ಆದರೆ ತಾಲಿಬಾನ್ ಉಗ್ರ ಸಂಘಟನೆ ಈ ಹತ್ಯೆಯನ್ನು ತಾವು ಮಾಡಿಲ್ಲ ಎಂದು ಹೇಳಿಕೊಂಡಿದೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನಾ ಪಡೆ ಹಿಂದಿರುಗಿದ ನಂತರ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ್ ಭದ್ರತಾ ಪಡೆ ವಿರುದ್ಧ ಸಮರ ಸಾರಿದ್ದು, ಶೇ.70ರಷ್ಟು ಅಫ್ಘಾನಿಸ್ತಾನ್ ಪ್ರದೇಶಗಳು ತಮ್ಮ ವಶದಲ್ಲಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.


