Friday, June 5, 2026
Homeಕರಾವಳಿಉಡುಪಿಕುಂದಾಪುರ: ಸೈಕಲ್ ಗೆ ಕಾರು ಡಿಕ್ಕಿ; ಸೈಕಲ್ ಸವಾರ ಮೃತ್ಯು

ಕುಂದಾಪುರ: ಸೈಕಲ್ ಗೆ ಕಾರು ಡಿಕ್ಕಿ; ಸೈಕಲ್ ಸವಾರ ಮೃತ್ಯು

- Advertisement -
- Advertisement -

ಕುಂದಾಪುರ: ಹೆಮ್ಮಾಡಿ ಹಾಗೂ ತಲ್ಲೂರು ನಡುವಿನ ಜಾಲಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೈಕಲ್ ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಸ್ಥಳೀಯ ಸಂತೋಷ್ ನಗರದ ನಿವಾಸಿ ರಾಮ ಕುಲಾಲ್(52) ಎಂದು ಗುರುತಿಸಲಾಗಿದೆ. ಗಾಯಗೊಂಡ ರಾಮ ಕುಲಾಲ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದ್ದಾದರೂ ಗಂಭೀರ ಸ್ಥಿತಿಯಲ್ಲಿದ್ದ ಅವರು ದಾರಿಮಧ್ಯೆ ಮೃತಪಟ್ಟರೆನ್ನಲಾಗಿದೆ.

ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!