Saturday, October 17, 2026
Homeತಾಜಾ ಸುದ್ದಿಉತ್ತರ ಪ್ರದೇಶದಲ್ಲಿ ವಿಚಿತ್ರ ಪ್ರೇಮ ಪ್ರಕರಣ: 75 ವರ್ಷದ ವೃದ್ಧನೊಂದಿಗೆ ಮಗಳ ಗೆಳತಿಯ ಎಂಗೇಜ್ಮೆಂಟ್

ಉತ್ತರ ಪ್ರದೇಶದಲ್ಲಿ ವಿಚಿತ್ರ ಪ್ರೇಮ ಪ್ರಕರಣ: 75 ವರ್ಷದ ವೃದ್ಧನೊಂದಿಗೆ ಮಗಳ ಗೆಳತಿಯ ಎಂಗೇಜ್ಮೆಂಟ್

- Advertisement -
- Advertisement -

ಉತ್ತರ ಪ್ರದೇಶ:ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬ ಮಾತಿಗೆ ನಿದರ್ಶನವೆಂಬಂತೆ, ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಿಂದ ಒಂದು ಅಚ್ಚರಿಯ ಹಾಗೂ ಚರ್ಚೆಗೆ ಗ್ರಾಸವಾಗಿರುವ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. 75 ವರ್ಷದ ವೃದ್ಧರೊಬ್ಬರು ತಮ್ಮ ಸ್ವಂತ ಮಗಳ ಗೆಳತಿಯಾಗಿರುವ 30 ವರ್ಷದ ಯುವತಿಯೊಂದಿಗೆ ಸಾರ್ವಜನಿಕವಾಗಿ ಉಂಗುರ ಬದಲಾಯಿಸಿಕೊಂಡು ಸगाई ಮಾಡಿಕೊಂಡಿದ್ದಾರೆ. ಇಬ್ಬರ ವಯಸ್ಸಿನ ನಡುವೆ ಬರೋಬ್ಬರಿ 45 ವರ್ಷಗಳ ಬೃಹತ್ ಅಂತರವಿರುವುದು ಎಲ್ಲೆಡೆ ದಿಗಿಲು ಹುಟ್ಟಿಸಿದೆ.

ಔರೈಯಾ ನಿವಾಸಿ 75 ವರ್ಷದ ರಾಮ್‌ಸುಘರ್ ಹಾಗೂ 30 ವರ್ಷದ ರೀನಾ ರಾಗ್‌ಪೂತ್ ಕಳೆದ ಕೆಲವು ಸಮಯದಿಂದ ಪರಸ್ಪರ ಹತ್ತಿರವಾಗಿದ್ದರು. ವಿಶೇಷವೆಂದರೆ, ರೀನಾ ರಾಗ್‌ಪೂತ್ ರಾಮ್‌ಸುಘರ್ ಅವರ ಮಗಳ ಸ್ನೇಹಿತೆಯಾಗಿದ್ದು, ಸ್ನೇಹದ ಮೂಲಕ ಮನೆಗೆ ಬರುತ್ತಿದ್ದ ಈಕೆಯೊಂದಿಗೆ ವೃದ್ಧನಿಗೆ ಒಡನಾಟ ಬೆಳೆದಿತ್ತು. ಇತ್ತೀಚೆಗೆ ಇವರಿಬ್ಬರೂ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವಿವಾಹ ಪೂರ್ವ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಚಂಡಮಾರುತದಂತೆ ಹಬ್ಬಿವೆ.

ಈ ವಿಚಿತ್ರ ಜೋಡಿಯ ಎಂಗೇಜ್ಮೆಂಟ್ ದೃಶ್ಯಗಳು ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಎರಡು ಬಣಗಳಾಗಿ ವಿಭಜನೆಗೊಂಡು ತೀವ್ರ ಚರ್ಚೆಯಲ್ಲಿ ತೊಡಗಿದ್ದಾರೆ.ಟೀಕಾಕಾರರ ವಾದ: ಮಗಳ ವಯಸ್ಸಿನ ಹುಡುಗಿಯನ್ನು ವೃದ್ಧರೊಬ್ಬರು ವರಿಸಲು ಹೊರಟಿರುವುದು ಸಮಾಜದ ಸ್ವಾಸ್ಥ್ಯಕ್ಕೆ ವಿರೋಧವಾದುದು. ಇನ್ಮುಂದೆ ವ್ಯೂವ್ಸ್ ಗಿಟ್ಟಿಸಿಕೊಳ್ಳಲು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಹಾಗೂ ಪ್ರಚಾರ ಪಡೆಯಲು ಇಂತಹ ನಾಟಕೀಯ ಮಸಲತ್ತುಗಳನ್ನು ಮಾಡುತ್ತಿದ್ದಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರೀತಿ ಮತ್ತು ನಂಬಿಕೆಗೆ ಯಾವುದೇ ವಯಸ್ಸಿನ ಗಡಿಗಳಿಲ್ಲ. ಇದು ಸಂಪೂರ್ಣವಾಗಿ ಅವರ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಆಯ್ಕೆಯಾಗಿದ್ದು, ಇಬ್ಬರ ಒಪ್ಪಿಗೆಯೊಂದಿಗೆ ನಡೆಯುವ ನಿರ್ಧಾರವನ್ನು ಹೊರಗಿನವರು ಪ್ರಶ್ನಿಸಬಾರದು ಎಂದು ಕೆಲವರು ವಾದ ಮಂಡಿಸುತ್ತಿದ್ದಾರೆ.

- Advertisement -

Latest News

error: Content is protected !!