Friday, May 3, 2024
Homeಇತರಆಡಿನ ತಂದೆ ಯಾರು ಅಂತಾ ತಿಳಿಯಲು ಡಿಎನ್ಎ ಪರೀಕ್ಷೆಯ ಮೊರೆ ಹೋದ ಮಹಿಳೆ

ಆಡಿನ ತಂದೆ ಯಾರು ಅಂತಾ ತಿಳಿಯಲು ಡಿಎನ್ಎ ಪರೀಕ್ಷೆಯ ಮೊರೆ ಹೋದ ಮಹಿಳೆ

spot_img
- Advertisement -
- Advertisement -

ಜಗತ್ತಿನಲ್ಲಿ ಎಂತೆಂತಹ ಘಟನೆಗಳು ನಡೆಯುತ್ತೆ ಅನ್ನೋದನ್ನು ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಕೆಲವೊಂದು ಘಟನೆಗಳನ್ನು ನೋಡಿದಾಗ ಅಯ್ಯೋ! ಹೀಗೆಲ್ಲಾ ಆಗುತ್ತಾ ಅನ್ನೋ ಅನುಮಾನ ಕೂಡ ಮೂಡುತ್ತದೆ. ಜೊತೆಗೆ ಅಚ್ಚರಿಯೂ ಆಗುತ್ತದೆ. ಅಂತಹದ್ದೇ ಘಟನೆಯೊಂದನ್ನು ನಾವು ನಿಮಗೆ ಹೇಳ್ತೀವಿ.

ಅಂದ್ಹಾಗೆ ಇದು ಮಹಿಳೆಯೊಬ್ಬಳು ತಾನು ಕೊಂಡ ಆಡಿನ ತಂದೆ ಯಾರು ಎಂದು ತಿಳಿಯಲು ಕೋರ್ಟ್ ಮೊರೆ ಹೋದ ಘಟನೆ. ಅಂದ್ಹಾಗೆ ಇಂತಹದ್ದೊಂದು ಅಚ್ಚರಿಯ ಘಟನೆ ನಡೆದಿರೋದು ಫ್ಲೊರಿಡಾದಲ್ಲಿ. ಅಷ್ಟಕ್ಕೂ ಆಗಿದ್ದು ಏನಪ್ಪಾ ಅಂದ್ರೆ ಕ್ರಿಸ್ ಹೆಡ್ ಸ್ಟ್ರಾಮ್  ಅನ್ನೋ ಮಹಿಳೆ,  ಹೀದರ್ ಡೇನರ್ ಅನ್ನೋ ಮಹಿಳೆಯಿಂದ ಉತ್ತಮ ತಳಿಯ ಆಡುಗಳನ್ನು ಕೊಳ್ಳೋದಕ್ಕೆ ಅಂತಾ ಆಕೆಗೆ ಸುಮಾರು 900 ಡಾಲರ್ ಅಂದರೆ 96 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ನೀಡಿದ್ದಾಳೆ. ಅಂದ್ಹಾಗೆ ಅಲ್ಲಿನ ನಿಯಮಾವಳಿಗ ಪ್ರಕಾರ ಉತ್ತಮ ತಳಿಯ ಆಡುಗಳನ್ನು ಕೊಳ್ಳಬೇಕಾದರೆ ಅಮೇರಿಕನ್ ಡೈರಿ ಆಡಿನ ಸಂಘದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅದರಂತೆ ಹೀದರ್ ಡೇನರ್ ಕೂಡ ನೋಂದಣಿ ಮಾಡಿಕೊಂಡಿದ್ದಾಳೆ. ಆದರೆ ಆಡು ಖರೀದಿ ಮಾಡಿದ ಕೆಲ ದಿನಗಳ ಬಗ್ಗೆ ಕ್ರಿಸ್ ಗೆ ಹೀದರ್ ನಿಂದ ತಾನು ಕೊಂಡ ಆಡುಗಳ ತಳಿಯ ಬಗ್ಗೆ ಅನುಮಾನ ಶುರುವಾಗಿದೆ.

ನೋಂದಣಿ ಆಗಿದೆಯೋ ಇಲ್ಲವೋ ಅನ್ನೋ ಸಂದೇಹ ಮೂಡಿದೆ.ಆಗ ಹೀದರ್ ಳನ್ನು ಕ್ರಿಸ್ ಪ್ರಶ್ನೆ ಮಾಡಿದ್ದಾಳೆ. ತಾನು ಖರೀದಿ ಮಾಡಿದ ಆಡಿನ ಮರಿಗಳ ನೋಂದಣಿ ಆಗಿದೆಯಾ ಎಂದು ಕೇಳಿದ್ದಾಳೆ. ಆಗ ಹೀದರ್ ಆಡುಗಳ ತಂದೆಯ ನೋಂದಣಿ ಆಗಿದೆ. ಮರಿಗಳ ನೋಂದಣಿ ಆಗಿಲ್ಲ ಎಂದಿದ್ದಾಳೆ. ಹಾಗಾಗಿ ಇದು ಅದೇ ತಳಿಯ ಆಡಿನ ಮರಿಗಳ ಎಂದು ಪರೀಕ್ಷೆ ಮಾಡಬೇಕು ಎಂದು ಕ್ರಿಸ್ ಪಟ್ಟು ಹಿಡಿದಿದ್ದಾಳೆ. ಅದಕ್ಕಾಗಿ ಡಿಎನ್ ಎ ಪರೀಕ್ಷೆಗೆ ಕ್ರಿಸ್ ಮುಂದಾಗಿದ್ದಾಳೆ. ಅಲ್ಲದೇ ತನಗೆ ಅನ್ಯಾಯವಾಗಿದೆ ಎಂದು ಕೋರ್ಟ್ ಮೊರೆ ಹೋಗಿದ್ದಾಳೆ ಕ್ರಿಸ್…

- Advertisement -
spot_img

Latest News

error: Content is protected !!