Monday, May 13, 2024
Homeಕರಾವಳಿಸುಳ್ಯ: ಫೇಸ್ ಬುಕ್ ಮೂಲಕ ಪರಿಚಯವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾದ ಯುವತಿ, ಇದೀಗ ಗಂಡ ಬೇಕೆಂದು...

ಸುಳ್ಯ: ಫೇಸ್ ಬುಕ್ ಮೂಲಕ ಪರಿಚಯವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾದ ಯುವತಿ, ಇದೀಗ ಗಂಡ ಬೇಕೆಂದು ಮನೆ ಮುಂದೆ ಧರಣಿ.. !

spot_img
- Advertisement -
- Advertisement -

ಸುಳ್ಯ: ಎರಡು ವಾರದ ಹಿಂದೆ ಸುಳ್ಯ ಪೊಲೀಸ್ ಠಾಣೆಗೆ ಬಂದು ಕಟ್ಟೆಕಾರ್ ಅಂಗಡಿಯವರ ಮಗನ ಮೇಲೆ ದೂರು ನೀಡಿದ್ದ ಬೆಂಗಳೂರಿನ ಮಹಿಳೆ ಈಗ ಮಹಿಳಾ ಆಯೋಗದ ಆದೇಶ ಹಿಡಿದುಕೊಂಡು ಸುಳ್ಯಕ್ಕೆ ಬಂದಿದ್ದಾರೆ. ಪೊಲೀಸರು ಮತ್ತು ಸಿ.ಡಿ.ಪಿ.ಒ. ರವರು ಈಗ ಅವರನ್ನು ಕಟ್ಟೆ ಅಬ್ದುಲ್ಲರವರ ಮನೆಗೆ ಬಿಟ್ಟಿದ್ದಾರೆ. ಆದರೆ ಆಕೆಯನ್ನು ಮನೆ ಸೇರಿಸಲು ನಿರಾಕರಿಸಿರುವ ಕಟ್ಟೆ ಅಬ್ದುಲ್ಲ ಅವರ ಮನೆಯವರು ಮನೆಗೆ ಬೀಗ ಹಾಕಿಕೊಂಡು ಬೇರೆ ಕಡೆಗೆ ಹೋಗಿದ್ದಾರೆ. ಆದರೆ ಮಹಿಳೆ ಮನೆಯ ಜಗುಲಿಯಲ್ಲಿ ಕುಳಿತಿದ್ದಾರೆ. ನನಗೆ ನ್ಯಾಯ ಬೇಕು ಅಂತಿದ್ದಾರೆ ಮತ್ತೊಂದು ಕಡೆ ಪೊಲೀಸರು ಮನೆಯಂಗಳದಲ್ಲಿ ಕಾವಲು ನಿಂತಿದ್ದಾರೆ.

ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್ ತನ್ನನ್ನು ಮದುವೆಯಾಗಿದ್ದಾನೆ. ಅವನೊಂದಿಗೆ ಮತ್ತೆ ನನ್ನನ್ನು ಸೇರಿಸಬೇಕು ಎಂದು,  ಎರಡು ವಾರದ ಹಿಂದೆ ಬೆಂಗಳೂರಿನ ಆಸಿಯಾ ಎಂಬ ಮಹಿಳೆ ಸುಳ್ಯ ಪೊಲೀಸ್ ಠಾಣೆಗೆ ಬಂದಿದ್ದರು. ಮಂಗಳೂರಿಗೆ ಎಸ್ಪಿ ಕಚೇರಿಗೆ ಹೋಗಿ ಅಲ್ಲಿಂದ ಸುಳ್ಯ ಠಾಣೆಗೆ ಬಂದಿದ್ದ ಆಸಿಯಾರವರನ್ನು ಠಾಣೆಯಲ್ಲಿ ಕೂರಿಸಿದ ಪೋಲೀಸರು, ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್ ಮತ್ತು ಮನೆಯವರನ್ನು ಠಾಣೆಗೆ ಕರೆಸಿದ್ದರು. ಆ ಮಹಿಳೆಯೊಂದಿಗೆ ನನಗೆ ಯಾವುದೇ ಸಂಬಂಧ ಇಲ್ಲ ಎಂದು ಖಲೀಲ್ ಹೇಳಿಕೆ ನೀಡಿ ಆಕೆಯನ್ನು ಮನೆಗೆ ಕರೆದೊಯ್ಯಲು ನಿರಾಕರಿಸಿದ್ದರು. ಬಳಿಕ ಪೊಲೀಸರ ಸಲಹೆಯಂತೆ ಆಕೆ ಬೆಂಗಳೂರಿಗೆ ವಾಪಸಾಗಿದ್ದರು.

ಆದರೆ, ಜೂನ್ 22 ರಂದು ಬೆಂಗಳೂರಿನಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಆಸಿಯಾ “ತನ್ನ ಗಂಡನಾದ ಸುಳ್ಯದ ಕಟ್ಟೆಕಾರ್ ಇಬ್ರಾಹಿಂ ಖಲೀಲ್ ರವರ ಇಚ್ಛೆಯ ಮೇರೆಗೆ ವಿವಾಹಕ್ಕೂ ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು 12.7.2017ರಲ್ಲಿ ಇಬ್ರಾಹಿಂ ಖಲೀಲ್ ರವರನ್ನು ವಿವಾಹವಾಗಿರುತ್ತೇನೆ. 15.1.2020ರವರೆಗೆ ನಮ್ಮ ಕೌಟುಂಬಿಕ ಜೀವನ ಚೆನ್ನಾಗಿತ್ತು.  ಆದರೆ, ಸುಳ್ಯಕ್ಕೆ ಬಂದ ನಂತರ ಖಲೀಲ್ ರವರು ನನ್ನೊಂದಿಗಿನ  ಸಂಬಂಧವನ್ನು  ಸಂಪೂರ್ಣವಾಗಿ ಕಡಿದುಕೊಂಡಿದ್ದಾರೆ. ಅದಕ್ಕೆ ಅವರ ಕುಟುಂಬದವರು ಕುಮ್ಮಕ್ಕು ನೀಡುತ್ತಿದ್ದಾರೆ. ಇದರಿಂದ ನನಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ನನ್ನನ್ನು ಅವರ ಜೊತೆ ಸೇರಿಸಿ ಎಂದು ಮನವಿ ಮಾಡಿಕೊಂಡಿದ್ದರು.

ಅದರಂತೆ ಮಹಿಳಾ ಆಯೋಗದ ಅಧ್ಯಕ್ಷರು ಆಸಿಯಾ ಜೊತೆ ಸಮಾಲೋಚಿಸಿ, ಈ ಬಗ್ಗೆ  ಸೂಕ್ತಕ್ಕೆ ಕ್ರಮಕ್ಕೆ ಆಗ್ರಹಿಸಿದ್ದರು. ಅಲ್ಲದೇ 15 ದಿನಗಳೊಳಗೆ ಆಯೋಗಕ್ಕೆ ಈ ಬಗ್ಗೆ ವರದಿ ಕಳುಹಿಸಿಕೊಡುವಂತೆ  ಜೂನ್ 24 ರಂದು  ಆದೇಶ ನೀಡಿದರು. ಅದರಂತೆ ಸುಳ್ಯದ ಸಿಡಿಪಿಒ ಮತ್ತು ಸುಳ್ಯದ ಎಸ್ .ಐ.ಯವರು ಜೂ. 25ರಂದು ಸಂಜೆ ಸುಳ್ಯಕ್ಕೆ ಬಂದ ಆಸಿಯಾರನ್ನು ಕರೆದುಕೊಂಡು ಸುಳ್ಯದ ನಾವೂರು ರಸ್ತೆಯಲ್ಲಿರುವ ಕಟ್ಟೆ ಅಬ್ದುಲ್ಲರ ಮನೆಗೆ ಬಂದರು.ಆ ವೇಳೆಗೆ ಮನೆಯವರು ಬಾಗಿಲಿಗೆ ಬೀಗ ಹಾಕಿ ಹೋಗಿದ್ದರು . ಬಳಿಕ ಖಲೀಲ್ ಮತ್ತು ಮನೆಯವರನ್ನು ಪೋಲೀಸರು ಕರೆಸಿ ಹೇಳಿಕೆ ಪಡೆಯಲಾಯಿತು.

“ನಾನು ಆಕೆಯನ್ನು ಮದುವೆಯಾಗಿದ್ದೂ ಇಲ್ಲ . ಸಂಬಂಧ ಇಟ್ಟುಕೊಂಡಿದ್ದೂ ಇಲ್ಲ. ಸುಳ್ಳು ಹೇಳಿಕೊಂಡು ಬಂದ ಈಕೆಯನ್ನು ನಾವು ಮನೆಯೊಳಗೆ ಸೇರಿಸಿಕೊಳ್ಳುವುದೂ ಇಲ್ಲ” ಎಂದು ಖಲೀಲ್ ಮತ್ತು ಅವರ ಮನೆಯವರು ಹೇಳಿದರೆ, “ಇದು ನನ್ನ ಗಂಡನ ಮನೆ . ಅವರು ಮನೆಗೆ ಸೇರಿಸುವ ವರೆಗೆ ನಾನು ಇಲ್ಲೇ ಇರುತ್ತೇನೆ” ಎಂದು ಆಸಿಯಾ ಹೇಳಿಕೆ ನೀಡಿದ್ದಾರೆ. ಬಳಿಕ ಆಸಿಯಾ ಮನೆಯ ಜಗುಲಿಯಲ್ಲಿಯೇ ಕುಳಿತು ನನಗೆ ಪತಿ ಬೇಕು ಅಂತಾ ಪಟ್ಟು ಹಿಡಿದಿದ್ದಾರೆ.ಅವರಿಗೆ ಇದೀಗ ಮಹಿಳಾ ಪೊಲೀಸರು ಕಾವಲು ನಿಂತಿದ್ದಾರೆ.

- Advertisement -
spot_img

Latest News

error: Content is protected !!