Sunday, June 7, 2026
Homeಕರಾವಳಿಬೆಳ್ತಂಗಡಿ; ತವರು ಮನೆಗೆ ಹೋಗಿದ್ದಾಗ ಮನೆಗೆ ನುಗ್ಗಿ ಕಳ್ಳತನ

ಬೆಳ್ತಂಗಡಿ; ತವರು ಮನೆಗೆ ಹೋಗಿದ್ದಾಗ ಮನೆಗೆ ನುಗ್ಗಿ ಕಳ್ಳತನ

- Advertisement -
- Advertisement -

ಬೆಳ್ತಂಗಡಿ; ಮನೆ ಯಜಮಾನಿ ತವರು ಮನೆಗೆ ಹೋಗಿದ್ದಾಗ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುದ್ಯಾಡಿ ಗ್ರಾಮದಲ್ಲಿ ನಡೆದಿದೆ.

ನೀತಾ (34) ಎಂಬುವವರು ದಿನಾಂಕ: 11.05.2024 ರಂದು ಮಧ್ಯಾಹ್ನ ತಮ್ಮ ಮನೆಯ ಬಾಗಿಲು ಹಾಕಿ ತವರು ಮನೆಗೆ ಹೋಗಿದ್ದರು. ದಿನಾಂಕ: 13.05.2024 ರಂದು ಮಧ್ಯಾಹ್ನ, ಅವರ ಮನೆಯ ಬೀಗವನ್ನು ಯಾರೋ ಕಳ್ಳರು ಒಡೆದಿರುವ  ಬಗ್ಗೆ ನೆರೆಮನೆಯರವರು ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ನೀತಾ ಮನೆಗೆ ಬಂದು ನೋಡಿದಾಗ ಮುಂಭಾಗದ ಬಾಗಿಲಿನ ಬೀಗ ವನ್ನು ಯಾವುದೋ ಆಯುಧದಿಂದ ಮುರಿದು ಒಳಪ್ರವೇಶಿಸಿರುವ ಅಪರಿಚಿತ ಕಳ್ಳರು, ಕಪಾಟಿನ ಬೀಗವನ್ನು ಮುರಿದು, ಅದರಲ್ಲಿದ್ದ ಅಂದಾಜು ರೂ 1,98,000 ಮೌಲ್ಯದ 33 ಗ್ರಾಂ ಚಿನ್ನಾಭರಣಗಳು ಹಾಗೂ ರೂ 40,000 ನಗದು ಹಣವನ್ನು ಕದ್ದಿದ್ದಾರೆ. ಕಳವಾದ ನಗದು ಹಣ ಹಾಗೂ ಚಿನ್ನದ ಒಟ್ಟು ಮೌಲ್ಯ ಅಂದಾಜು ಸುಮಾರು 2,38,000 ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್  ಠಾಣೆಯಲ್ಲಿ ಅ.ಕ್ರ 45/2024  ಕಲಂ : 454,457,380  ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

- Advertisement -

Latest News

error: Content is protected !!