Saturday, June 6, 2026
Homeತಾಜಾ ಸುದ್ದಿ'ಲಾಕ್ ಡೌನ್' ವೇಳೆ ಕುಟುಂಬದೊಂದಿಗೆ ಜಮೀನಿನಲ್ಲಿ ಬೀಡುಬಿಟ್ಟ ನಟಿ ಜೆನಿಲಿಯಾ-ರಿತೇಶ್ ದೇಶ್ ಮುಖ್

'ಲಾಕ್ ಡೌನ್' ವೇಳೆ ಕುಟುಂಬದೊಂದಿಗೆ ಜಮೀನಿನಲ್ಲಿ ಬೀಡುಬಿಟ್ಟ ನಟಿ ಜೆನಿಲಿಯಾ-ರಿತೇಶ್ ದೇಶ್ ಮುಖ್

- Advertisement -
- Advertisement -

ಮುಂಬೈ: ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಜಮೀನುಗಳತ್ತ ಒಲವು ತೋರಿಸುತ್ತಿದ್ದಾರೆ. ಇದೀಗ ಬಾಲಿವುಡ್ ಸೆಲೆಬ್ರಿಟಿಯಾದ ರಿತೇಶ್ ದೇಶ್ಮುಖ್ ತಮ್ಮ ಪತ್ನಿ ಜೆನಿಲಿಯಾ ಹಾಗೂ ಮಕ್ಕಳೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಲಾತೂರ್ ನಲ್ಲಿ ಇರುವ ತಮ್ಮ ಜಮೀನಿನಲ್ಲಿ ಕಾಲ ಕಳೆದಿದ್ದಾರೆ.

ಜೆನಿಲಿಯಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅವರ ಮಕ್ಕಳು ಒಂದು ಮರದ ನೆರಳಿನಲ್ಲಿ ಕೂತು ಓದುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನನ್ನ ಮಕ್ಕಳು ಪ್ರಾಣಿ – ಪಕ್ಷಿಗಳು ಹಾಗು ಪರಿಸರದ ಜೊತೆ ಬೆಳೆಯಬೇಕು ಎಂದು ಜೆನಿಲಿಯಾ ಹೇಳಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಆಗ್ನೇಯ ಭಾಗದಲ್ಲಿರುವ ಲಾತೂರ್, ಮರಾಠವಾಡದ ಒಂದು ಪ್ರಾಂತವಾಗಿದ್ದು, ಇಲ್ಲಿ ಸರಿಸುಮಾರು 7 ನೆಯ ಶತಮಾನದಷ್ಟು ಹಳೆಯ ಕಾಲದ ಐತಿಹಾಸಿಕ ಸ್ಥಳಗಳು ಮತ್ತು ವಾಸ್ತುಶಿಲ್ಪಗಳಿದ್ದು, ಇವುಗಳನ್ನು ಇಂದಿಗೂ ಕೂಡ ಅಚ್ಚುಕಟ್ಟಾಗಿ ಸಂರಕ್ಷಿಸಿಡಲಾಗಿದೆ.

- Advertisement -

Latest News

error: Content is protected !!