Wednesday, November 18, 2026
Homeತಾಜಾ ಸುದ್ದಿಕೋಟಿ ಆಸ್ತಿ ಇದ್ರೂ ಬರಿಗಾಲಲ್ಲಿ ಓಡಾಡೋದೇಕೆ ನಟ ವಿಜಯ್ ಆಂಟೋನಿ?; ಇದರ ಹಿಂದಿದೆ ಕಣ್ಣೀರು ತರಿಸುವ...

ಕೋಟಿ ಆಸ್ತಿ ಇದ್ರೂ ಬರಿಗಾಲಲ್ಲಿ ಓಡಾಡೋದೇಕೆ ನಟ ವಿಜಯ್ ಆಂಟೋನಿ?; ಇದರ ಹಿಂದಿದೆ ಕಣ್ಣೀರು ತರಿಸುವ ಕಹಾನಿ

- Advertisement -
- Advertisement -

ಚೆನ್ನೈ: ತಮಿಳು ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಅವರು ಸಾರ್ವಜನಿಕವಾಗಿ ಬರಿಗಾಲಿನಲ್ಲಿ ಓಡಾಡುವುದರ ಹಿಂದಿನ ಕರುಣಾಜನಕ ಸತ್ಯವನ್ನು ಪತ್ನಿ ಫಾತಿಮಾ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

ನವೆಂಬರ್ 20ರಂದು ತೆರೆಕಾಣಲಿರುವ ‘ಅಪ್ಪಾಕುಟ್ಟಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಫಾತಿಮಾ, 2023ರಲ್ಲಿ ಹಿರಿಯ ಮಗಳು ಮೀರಾಳನ್ನು ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಭಾವುಕರಾದರು. “ಕಾಲೇಜಿಗೆ ಹೋಗುವ ವಯಸ್ಸಿನ ಮಗಳಿಗಾಗಿ ವಿಜಯ್ ವಿದೇಶಗಳಿಂದ ರಾಶಿ ರಾಶಿ ಚಪ್ಪಲಿ, ಶೂಗಳನ್ನು ತಂದಿದ್ದರು. ಅವುಗಳನ್ನೆಲ್ಲಾ ನೋಡಿದ ಬಳಿಕ, ಜೀವನಪರ್ಯಂತ ಚಪ್ಪಲಿ ಧರಿಸದಿರಲು ವಿಜಯ್ ಪ್ರತಿಜ್ಞೆ ಮಾಡಿದರು. ವಿದೇಶಿ ಸಂಗೀತ ಕಚೇರಿಗಳಲ್ಲಿ ಮಾತ್ರ ಅನಿವಾರ್ಯವಾಗಿ ಶೂ ಧರಿಸಿ, ಕಾರ್ಯಕ್ರಮ ಮುಗಿದ ತಕ್ಷಣ ಕಳಚಿಡುತ್ತಾರೆ” ಎಂದು ತಿಳಿಸಿದರು.

ಅಲ್ಲದೆ, ರಾಡೋ, ರೋಲೆಕ್ಸ್‌ನಂತಹ ದುಬಾರಿ ವಾಚ್‌ಗಳನ್ನು ತ್ಯಜಿಸಿರುವ ವಿಜಯ್, ಮಗಳು ಕೊನೆಯುಸಿರೆಳೆಯುವಾಗ ಕಟ್ಟಿಕೊಂಡಿದ್ದ ₹4,000 ಬೆಲೆಯ ಸಾಮಾನ್ಯ ವಾಚ್ ಅನ್ನೇ ಈಗಲೂ ಧರಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಕಿರಿಯ ಮಗಳು ಲಾರಾ ಮೊದಲ ಬಾರಿಗೆ ವೇದಿಕೆಯಲ್ಲಿ ಮಾತನಾಡಿದ್ದನ್ನು ಕಂಡು ವಿಜಯ್ ಆಂಟೋನಿ ಮೀರಾಳನ್ನು ನೆನೆದು ಕಣ್ಣೀರಿಟ್ಟರು.

- Advertisement -

Latest News

error: Content is protected !!