Friday, November 13, 2026
Homeತಾಜಾ ಸುದ್ದಿಸುಬ್ರಹ್ಮಣ್ಯ: 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಕೇರಳದಲ್ಲಿ ಸೆರೆ

ಸುಬ್ರಹ್ಮಣ್ಯ: 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಕೇರಳದಲ್ಲಿ ಸೆರೆ

- Advertisement -
- Advertisement -

ಸುಬ್ರಹ್ಮಣ್ಯ: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ 26 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.

ಕೇರಳದ ತ್ರಿಶೂರ್ ನಿವಾಸಿ ಟೋಮಿ ಯಾನೆ ಥಾಮಸ್ ಬಂಧಿತ ಆರೋಪಿ. 2000ನೇ ಇಸವಿಯ ಸೆಪ್ಟೆಂಬರ್ 10ರಂದು ಗುತ್ತಿಗಾರು ಎಂಬಲ್ಲಿ ಕೇರಳ ಮೂಲದ ಜೊಯ್, ಶೆಲ್ಟನ್ ಮತ್ತು ಟೋಮಿ ನಡುವೆ ಕೆಲಸದ ವಿಚಾರಕ್ಕೆ ಜಗಳ ನಡೆದು, ಜೊಯ್ ಎಂಬಾತನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಬ್ರಹ್ಮಣ್ಯ ಠಾಣಾ ಎಎಸ್‌ಐ ಸ್ಕರೀಯಾ, ಸುಳ್ಯ ಠಾಣಾ ಹೆಡ್ ಕಾನ್‌ಸ್ಟೇಬಲ್ ಹರೀಶ್ ಮತ್ತು ಪುತ್ತೂರು ಸಂಚಾರ ಠಾಣಾ ಹೆಡ್ ಕಾನ್‌ಸ್ಟೇಬಲ್ ಆದ್ರಾಂ ಅವರ ತಂಡ ನ. 12ರಂದು ಕೇರಳದಲ್ಲಿ ದಸ್ತಗಿರಿ ಮಾಡಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ. 25ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

- Advertisement -

Latest News

error: Content is protected !!