Wednesday, November 18, 2026
Homeತಾಜಾ ಸುದ್ದಿಶಾಸಕ ಪ್ರದೀಪ್ ಈಶ್ವರ್ ದಂಪತಿಗೆ ಹೆಣ್ಣು ಮಗು ಜನನ; ಮನೆಗೆ ಮಹಾಲಕ್ಷ್ಮಿ ಆಗಮನದ ಸಂಭ್ರಮ ಹಂಚಿಕೊಂಡ...

ಶಾಸಕ ಪ್ರದೀಪ್ ಈಶ್ವರ್ ದಂಪತಿಗೆ ಹೆಣ್ಣು ಮಗು ಜನನ; ಮನೆಗೆ ಮಹಾಲಕ್ಷ್ಮಿ ಆಗಮನದ ಸಂಭ್ರಮ ಹಂಚಿಕೊಂಡ ಶಾಸಕ

- Advertisement -
- Advertisement -

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಹಾಗೂ ಪತ್ನಿ ನಯನ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ತಂದೆಯಾದ ಈ ಸಂತಸದ ವಿಚಾರವನ್ನು ಸ್ವತಃ ಪ್ರದೀಪ್ ಈಶ್ವರ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು ಹಾಗೂ ಕ್ಷೇತ್ರದ ಜನತೆಯೊಂದಿಗೆ ಹಂಚಿಕೊಂಡಿದ್ದಾರೆ. ನವಜಾತ ಶಿಶುವನ್ನು ಕೈಯಲ್ಲಿ ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿರುವ ಅವರು, ತಮ್ಮ ಜೀವನದ ಈ ವಿಶೇಷ ಕ್ಷಣದ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಸದ್ಯ ತಾಯಿ ನಯನ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ. ಈ ಸಿಹಿಸುದ್ದಿ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ರಾಜಕೀಯ ಗಣ್ಯರು ಹಾಗೂ ಹಿತೈಷಿಗಳಿಂದ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

- Advertisement -

Latest News

error: Content is protected !!