Sunday, April 28, 2024
Homeತಾಜಾ ಸುದ್ದಿಪಾರಂಪರಿಕ ಸ್ಮಾರಕವಾಗಲಿದೆಯೇ 'ರಾಮಸೇತು'? ಜುಲೈ 26ಕ್ಕೆ ಸುಪ್ರೀಂ ವಿಚಾರಣೆ!

ಪಾರಂಪರಿಕ ಸ್ಮಾರಕವಾಗಲಿದೆಯೇ ‘ರಾಮಸೇತು’? ಜುಲೈ 26ಕ್ಕೆ ಸುಪ್ರೀಂ ವಿಚಾರಣೆ!

spot_img
- Advertisement -
- Advertisement -

ಹೊಸದಿಲ್ಲಿ: ‘ರಾಮಸೇತು’ವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ‘ರಾಮಸೇತು’ವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ಮನ್ನಿಸಿರುವ ಸುಪ್ರೀಂ ಕೋರ್ಟ್‌ ಜುಲೈ 26 ರಂದು ವಿಚಾರಣೆ ನಡೆಸಲಿದೆ. ಇದೇ ವೇಳೆ ಮುಖ್ಯ ನ್ಯಾಯಮೂರ್ತಿಗಳು, ನನ್ನ ನಿವೃತ್ತಿಯ ನಂತರ ಈ ಪ್ರಕರಣವನ್ನು ಲಿಸ್ಟ್‌ ಮಾಡಿ ಎಂದು ತಮಾಷೆಯಾಗಿ ನುಡಿದರು.

ರಾಮಸೇತು ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿರುವ ಪಂಬನ್ ದ್ವೀಪ ಮತ್ತು ಮನ್ನಾರ್ ದ್ವೀಪದ ನಡುವಿನ ಸುಣ್ಣದ ರಚನೆಗಳ ಸರಣಿಯಾಗಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿ ಪೀಠ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದರು. ಈ ಮಹತ್ವದ ವಿಷಯವನ್ನು ತಕ್ಷಣ ವಿಚಾರಣೆಗೆ ಪಟ್ಟಿ ಮಾಡಬೇಕು ಎಂದು ಕೋರಿದ್ದ ಕಾರಣ ಜುಲೈ 26ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

ಅರ್ಜಿ ಕುರಿತು ವಿಚಾರಣೆ ಮಾಡುವ ಸಮಯದಲ್ಲಿ ಮುಖ್ಯ ನ್ಯಾಯಾಧೀಶರು “ನನ್ನ ನಿವೃತ್ತಿಯ ನಂತರ ಇದನ್ನು ಪಟ್ಟಿ ಮಾಡಲಾಗುವುದು” ಎಂದು ತಮಾಷೆಯಾಗಿ ಹೇಳಿದರು. ತರುವಾಯ ಜುಲೈ 26 ರಂದು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಿದರು. ರಾಮಸೇತು ಅಸ್ತಿತ್ವವನ್ನು ಕೇಂದ್ರವು ಒಪ್ಪಿಕೊಂಡಿರುವ ಮೊದಲ ಸುತ್ತಿನ ವಿಚಾರಣೆಯಲ್ಲಿ ತಾನು ಗೆದ್ದಿದ್ದೇನೆ ಎಂದು ಬಿಜೆಪಿ ನಾಯಕ ವರದಿಯಲ್ಲಿ ತಿಳಿಸಿದ್ದರು. ಅವರ ಪ್ರಕಾರ, ಈ ಬೇಡಿಕೆಯನ್ನು ಪರಿಗಣಿಸಲು ಸಂಬಂಧಿಸಿದ ಕೇಂದ್ರ ಸಚಿವರು 2017 ರಲ್ಲಿ ಸಭೆ ಕರೆದಿದ್ದರು. ಆದರೆ, ನಂತರ ಯಾವುದೇ ಬೆಳವಣಿಗೆ ಆಗಲಿಲ್ಲ ಎಂದು ತಿಳಿಸಿದರು.

ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರದ ಮೊದಲ ಅವಧಿಯಲ್ಲಿ ಆರಂಭಿಸಲಾದ ವಿವಾದಾತ್ಮಕ ‘ಸೇತುಸಮುದ್ರಂ ಶಿಪ್ ಚಾನೆಲ್ ಪ್ರಾಜೆಕ್ಟ್’ ವಿರುದ್ಧ ತಮ್ಮ ಪಿಐಎಲ್‌ನಲ್ಲಿ ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವ ವಿಷಯವನ್ನು ಸುಬ್ರಮಣಿಯನ್ ಸ್ವಾಮಿ ಪ್ರಸ್ತಾಪಿಸಿದ್ದರು.

- Advertisement -
spot_img

Latest News

error: Content is protected !!