Friday, June 5, 2026
Homeತಾಜಾ ಸುದ್ದಿಡಿವೋರ್ಸ್ ನೀಡಿದ ಕೋಪಕ್ಕೆ ಪತಿಯ ಕಾರನ್ನೇ ಜಖಂಗೊಳಿಸಿದ ಪತ್ನಿ

ಡಿವೋರ್ಸ್ ನೀಡಿದ ಕೋಪಕ್ಕೆ ಪತಿಯ ಕಾರನ್ನೇ ಜಖಂಗೊಳಿಸಿದ ಪತ್ನಿ

- Advertisement -
- Advertisement -

ಬೆಂಗಳೂರು: ಪತಿಯ ಕಾರನ್ನೇ ಪತ್ನಿ ಕಲ್ಲಿನಿಂದ ಜಜ್ಜಿ ಜಖಂಗೊಳಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕೋರ್ಟ್ ಬಳಿ ನಡೆದಿದೆ.

ತಿಪಟೂರಿನ ಶರತ್ ಜೋತೆ ನೆಲಮಂಗಲ ನಗರದ ಸುಭಾಷ್ ನಗರದ ಪ್ರಿಯಾಂಕ ಮದುವೆ ಎರಡು ವರ್ಷದ ಹಿಂದೆ ನಡೆದಿತ್ತು. ದಾಂಪತ್ಯ ಜೀವನ ಸರಿ ಹೊಂದದ ಕಾರಣ ಇಬ್ಬರಿಗೂ ಸೋಮವಾರ ಕೋರ್ಟ್ ವಿಚ್ಛೇದನ ನೀಡಿತ್ತು.ಇದರಿಂದ ಬೇಸತ್ತ ಪ್ರಿಯಾಂಕ ಕೋರ್ಟ್ ಬಳಿ ನಿಲ್ಲಿಸಿದ್ದ ಪತಿ ಕಾರನ್ನ ಜಖಂಗೊಳಿಸಿದ್ದಾರೆ.

ಹೆಂಡತಿಯಿಂದ ಬಿಡುಗಡೆಯಾದರು ಮುಕ್ತಿ ಸಿಗಲಿಲ್ಲವಲ್ಲ ಎಂದು ನೊಂದ ಪತಿ ಪತಿ ನ್ಯಾಯಕ್ಕಾಗಿ ನೆಲಮಂಗಲ ಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ನೆಲಮಂಗಲ ಟೌನ್ ಪೊಲೀಸರು ಘಟನೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಟ್ಟಿನಿಂದ ಆಕೆ ಈ ರೀತಿ ಮಾಡಿರಬಹುದು ಎನ್ನಲಾಗುತ್ತಿದೆ.

- Advertisement -

Latest News

error: Content is protected !!