Thursday, April 25, 2024
Homeತಾಜಾ ಸುದ್ದಿಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಸ್ವಪ್ನಾ ಸುರೇಶ್ ಗೆ ಎದೆನೋವು, ಆಸ್ಪತ್ರೆಗೆ ದಾಖಲು

ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಸ್ವಪ್ನಾ ಸುರೇಶ್ ಗೆ ಎದೆನೋವು, ಆಸ್ಪತ್ರೆಗೆ ದಾಖಲು

spot_img
- Advertisement -
- Advertisement -

ತಿರುವನಂತಪುರಂ: ದೇಶದ ಗಮನ ಸೆಳೆದ ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಗೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ತ್ರಿಶೂರ್ ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಐಸಿಯುಗೆ ಇಂದು ಸ್ಥಳಾಂತರಿಸಲಾಗಿದೆ. ತ್ರಿಶೂರ್ ಜಿಲ್ಲೆಯ ವಿಯೂರ್ ನ ಕೇಂದ್ರ ಕಾರಾಗೃಹದಲ್ಲಿದ್ದ ಸ್ವಪ್ನಾ ಸುರೇಶ್ ಗೆ ನಿನ್ನೆ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಐಸಿಯುಗೆ ಸ್ಥಳಾಂತರ ಮಾಡಲಾಗಿದೆ. ಇಸಿಜಿ ವರದಿಯಲ್ಲಿ ವ್ಯತ್ಯಾಸ ಕಂಡು ಬಂದಿರುವುದು ಗೊತ್ತಾಗಿದೆ. ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ರಾಜತಾಂತ್ರಿಕ ಮಾರ್ಗಗಳ ಮೂಲಕ ಕೇರಳ ರಾಜ್ಯದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪ ಸ್ವಪ್ನಾ ಸುರೇಶ್ ಮೇಲಿದೆ. 14.82 ಕೋಟಿ ರೂಪಾಯಿ ಮೌಲ್ಯದ 30 ಕೆಜಿ ಚಿನ್ನವನ್ನು ರಾಜತಾಂತ್ರಿಕ ಮಾರ್ಗದ ಮೂಲಕ ಅವರು ಕಳ್ಳಸಾಗಣೆ ಮಾಡಿದ್ದರು. ಜುಲೈ 5 ರಂದು ಕಸ್ಟಮ್ಸ್ ನಲ್ಲಿ ಪ್ರಕರಣ ದಾಖಲಾಗಿ ನಂತರದಲ್ಲಿ ಬೆಂಗಳೂರಿನಲ್ಲಿ ಆಕೆಯನ್ನು ಬಂಧಿಸಲಾಗಿತ್ತು.

ಈ ಘಟನೆಯ ವಿಚಾರಣೆ ಇನ್ನೂ ನಡೆಯುತ್ತಿದೆ. ಈಕೆಯ ಮೇಲೆ ಗಂಭೀರ ಆರೋಪ ಇರುವ ಹಿನ್ನೆಲೆಯಲ್ಲಿ ಜಾಮೀನು ಕೂಡ ಸಿಗಲಿಲ್ಲ. ಚಿನ್ನದ ಸ್ಮಗ್ಲಿಂಗ್​ ಕುರಿತಂತೆ ಈಕೆಯ ಹಿನ್ನೆಲೆ ಕೆದಕುತ್ತಾ ಹೋಗಿರುವ ತನಿಖಾಧಿಕಾರಿಗಳಿಗೆ ಬೆಚ್ಚಿಬೀಳಿಸುವಂಥ ಒಂದೊಂದೇ ಮಾಹಿತಿಗಳು ಲಭ್ಯವಾಗುತ್ತಿವೆ. ಸ್ಮಗ್ಲಿಂಗ್​ ಜಾಲದ ವಿಸ್ತಾರ ಅಗೆದಷ್ಟೂ, ಬಗೆದಷ್ಟೂ ಸಿಗುತ್ತಿವೆ. ಇವೆಲ್ಲವನ್ನೂ ಇಷ್ಟು ವರ್ಷ ನಿರಾತಂಕವಾಗಿ ನಿಭಾಯಿಸುತ್ತಾ ಬಂದಿರುವ ಸ್ವಪ್ನಾ ಸುರೇಶ್​ ತನಗೆ ಎದೆನೋವು ಎಂದು ಹೇಳಿಕೊಂಡಿರುವ ಕಾರಣ, ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!