Saturday, May 18, 2024
Homeತಾಜಾ ಸುದ್ದಿಮಣಿಪಾಲ ಆಸ್ಪತ್ರೆಯ ವೈದ್ಯ ಡಾ.ಪಾಷಾ ಜತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ರಾ ಸಂಜನಾ.?

ಮಣಿಪಾಲ ಆಸ್ಪತ್ರೆಯ ವೈದ್ಯ ಡಾ.ಪಾಷಾ ಜತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ರಾ ಸಂಜನಾ.?

spot_img
- Advertisement -
- Advertisement -

ಬೆಂಗಳೂರು: ನಟಿ ಸಂಜನಾ ಮಾಧ್ಯಮಗಳ ಮುಂದೆ ತನಗಿನ್ನೂ ಮದುವೆಯೇ ಆಗಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ನಟಿ ಸಂಜನಾ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ ವೇಳೆ ಸಂಜನಾ ತಂದೆ ಸಂಜನಾ ಪತಿಯೇ ತಮಗೆ ಅನಾರೋಗ್ಯವಾದಾಗ ಚಿಕಿತ್ಸೆ ನೀಡುತ್ತಿದ್ದರು ಎಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಡಾ.ಪಾಷಾ ಮತ್ತು ಸಂಜನಾ

ನಟಿ ಸಂಜನಾ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಪಾಷಾ ಎಂಬವರ ಜತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು ಎಂದೂ ಕೂಡ ಹೇಳಲಾಗುತ್ತಿದೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ಡಾಕ್ಟರ್ ಗೆ ಕಾಲ್ ಮಾಡಬೇಕು ಎಂದಿದ್ದಾರೆ. ಅಲ್ಲದೇ ಅಕ್ಕಪಕ್ಕದ ಮನೆಯವರಿಗೂ ಡಾಕ್ಟರ್ ಗೆ ಕಾಲ್ ಮಾಡಿ, ವಕೀಲರ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ನಟಿ ಸಂಜನಾ ಅವರಿಗೆ ಬಿಎಂಡ್ಬ್ಲೂಕಾರ್, ಫ್ಲ್ಯಾಟ್ ಕೂಡ ಕೊಡಿಸಿದ್ದು, ಇದೇ ಡಾಕ್ಟರ್ ಎಂಬ ಮಾಹಿತಿ ಕೂಡ ಲಭ್ಯವಾಗಿದೆ ಎನ್ನಲಾಗುತ್ತಿದೆ.

ಜೊತೆಗೆ, ಸಂಜನಾ ಮನೆಯಲ್ಲಿ ರಾತ್ರಿ ಪಾರ್ಟಿ ಮಾಡಿ ತೊಂದರೆ ಕೊಡ್ತಾರೆ ಅಂತಾ ಈ ಹಿಂದೆ ಆರೋಪಿಸಿದ್ದ ನೆರೆಹೊರೆಯ ಫ್ಲಾಟ್ ಗೆ ನಿನ್ನೆ ಭೇಟಿ ನೀಡಿರುವ ಸಂಜನಾ, ನನ್ನ ಬಗ್ಗೆ ಪೊಲೀಸರು ಯಾವುದಾದರು ಮಾಹಿತಿ ಅಥವಾ ಪ್ರಶ್ನೆ ಕೇಳಿದರೆ ಏನು ಹೇಳಬೇಡಿ ಎಂದು ಕೇಳಿಕೊಂಡಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಇನ್ನು, ತನ್ನ ಮನೆಯಲ್ಲಿದ್ದಂಥ ವಿಮಾನ ಪ್ರಯಾಣದ ಟಿಕೆಟ್, ಗಿಫ್ಟ್‌ಗಳು ಹಾಗೂ ದಾಖಲಾತಿ ಸೇರಿ ಎಲ್ಲವನ್ನು ನಾಶಪಡಿಸಿದ್ದಾರೆ ಎಂದೂ ತಿಳಿದುಬಂದಿದೆ. ಜೊತೆಗೆ, ಪಾರ್ಟಿಗಳ ವಿಡಿಯೋ, ಫೋಟೋಗಳು ಸಹ ಡಿಲೀಟ್ ಮಾಡಿದ್ದಾರಂತೆ.

- Advertisement -
spot_img

Latest News

error: Content is protected !!