Sunday, April 28, 2024
Homeತಾಜಾ ಸುದ್ದಿಮಾಸ್ಕ್ ಧರಿಸಿಲ್ಲ ಅಂದ್ರೆ ಈ ದೇಶದಲ್ಲಿ ಏನ್ ಶಿಕ್ಷೆ ಗೊತ್ತಾ?

ಮಾಸ್ಕ್ ಧರಿಸಿಲ್ಲ ಅಂದ್ರೆ ಈ ದೇಶದಲ್ಲಿ ಏನ್ ಶಿಕ್ಷೆ ಗೊತ್ತಾ?

spot_img
- Advertisement -
- Advertisement -

ಉತ್ತರ ಕೊರಿಯಾ : ಕೊರೊನಾ ದೇಶದಲ್ಲಿ ಯಾವ ರೀತಿ ಸಮಸ್ಯೆ ಸೃಷ್ಟಿ ಮಾಡಿದೆ ಅನ್ನೋದು ನಿಮಗೆಲ್ಲಾ ಗೊತ್ತಾ ಇದೆ. ಕೊರೊನಾ ಆರ್ಭಟ ಇಷ್ಟೆಲ್ಲಾ ಜೋರಾಗಿದ್ರು ಜನರಿಗೆ ಮಾಸ್ಕ್ ಹಾಕೋದು ಅಂದ್ರೆ ದೊಡ್ಡ ಶಿಕ್ಷೆ ಅನ್ನೋ ರೀತಿ ವರ್ತಿಸ್ತಾರೆ.  ಮೂಗು ಮತ್ತು ಬಾಯಿ ಮುಚ್ಚಬೇಕಾದ ಮಾಸ್ಕ್ ನ್ನು ಕುತ್ತಿಗೆ ಹಾಕ್ಕೊಂಡು ಓಡಾಡೋರೇ ಹೆಚ್ಚು. ಆದರೆ ನೀವು ಉತ್ತರ ಕೊರಿಯಾದಲ್ಲೇನಾದ್ರು ಇದ್ದು ಈ ರೀತಿ ಮಾಸ್ಕ್ ಧರಿಸದೇ ಓಡಾಡಿದ್ರೆ ಏನ್ ಶಿಕ್ಷೆ ಗೊತ್ತಾ? ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾಸ್ಕ್‌ ಧರಿಸದವರಿಗೆ ಏನು ಶಿಕ್ಷೆ ವಿಧಿಸುತ್ತಾರೆ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗದೇ ಇರದು.

ಉತ್ತರ ಕೊರಿಯನ್ನರು ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಈಗ ಮಾಸ್ಕ್‌ ಧರಿಸದವರು 3 ತಿಂಗಳು ಕಷ್ಟಪಟ್ಟು ದುಡಿಯಬೇಕಾಗುತ್ತದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರದ ಈ ಆದೇಶ ಜನರಲ್ಲಿ ಭೀತಿ ಹುಟ್ಟಿಸಿದೆ.

ಈ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಉತ್ತರ ಕೊರಿಯಾ ಆಡಳಿತದಿಂದ ಕಾಲೇಜು ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಜನರ ಮೇಲೆ ನಿಗಾ ಇಡುತ್ತವೆ ಮತ್ತು ಮಾಸ್ಕ್ ಧರಿಸದೇ ಇರುವವರನ್ನು ಕಂಡರೆ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಉತ್ತರ ಕೊರಿಯಾದಲ್ಲಿನ ಕೊರೊನಾವೈರಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಮಾಹಿತಿಯಿಲ್ಲದಿದ್ದರೂ , ಈ ಕ್ರಮಗಳು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಭಯಭೀತರಾಗಿರುವಂತೆ ಕಾಣುತ್ತಿವೆ

- Advertisement -
spot_img

Latest News

error: Content is protected !!