Thursday, June 4, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿಂದು 5 ಸಾವಿರದ ಗಡಿ ದಾಟಿದ ಕೊರೊನಾ ಕೇಸುಗಳು, 97 ಜನ ಬಲಿ , ಬೆಂಗಳೂರಿನಲ್ಲಿ...

ರಾಜ್ಯದಲ್ಲಿಂದು 5 ಸಾವಿರದ ಗಡಿ ದಾಟಿದ ಕೊರೊನಾ ಕೇಸುಗಳು, 97 ಜನ ಬಲಿ , ಬೆಂಗಳೂರಿನಲ್ಲಿ 2207 ಹೊಸ ಪ್ರಕರಣಗಳು ಪತ್ತೆ

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಇವತ್ತು ಒಂದೇ ದಿನದಲ್ಲಿ ಕೊರೊನಾ ಭರ್ಜರಿ ಸ್ಕೋರ್ ಕಲೆ ಹಾಕಿದೆ. ಒಂದೇ ದಿನದಲ್ಲಿ 5030 ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗುವ ಮೂಲಕ ರಾಜ್ಯದ ಜನರನ್ನು ಆತಂಕಕ್ಕೆ ತಳ್ಳಿದೆ. ಇನ್ನು ಇವತ್ತು ಒಂದೇ 5030 ಪ್ರಕರಣಗಳು ವರದಿಯಾಗುವ ಮೂಲಕ ರಾಜ್ಯದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 49931ಕ್ಕೆ ಏರಿಕೆಯಾಗಿದೆ.

ಇನ್ನು ರಾಜ್ಯದಾದ್ಯಂತ 97 ಮಂದಿಯನ್ನು ಸಾವಿನ ಮನೆಗೆ ಕರೆದೊಯ್ದಿದೆ ಕೊರೊನಾ. ಸಮಾಧಾನಕರ ವಿಚಾರ ಅಂದ್ರೆ ಇಂದು ಬರೋಬ್ಬರಿ 2071 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು 2207 ಹೊಸ ಕೋವಿಡ್ ಪ್ರಕರಣಗಳು ಕಂಡು ಬಂದಿವೆ. ಅಲ್ಲದೇ 47 ಮಂದಿ ಬೆಂಗಳೂರಿನಲ್ಲಿ ಕೊರೊನಾಗೆ ಇಂದು ಬಲಿಯಾಗಿದ್ದಾರೆ. ಹಾಗೇ ಒಂದೇ ದಿನದಲ್ಲಿ 1038 ಮಂದಿ ಕೋವಿಡ್ ನಿಂದ ಗುಣಮುಖವಾಗಿ ಹಾಸ್ಪಿಟಲ್ ಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ ರಾಜಧಾನಿಯಲ್ಲಿ 29,091 ಕೊರೊನಾ ಸಕ್ರೀಯ ಪ್ರಕರಣಗಳಿವೆ.

- Advertisement -

Latest News

error: Content is protected !!