Friday, June 5, 2026
HomeUncategorizedಬಂಟ್ವಾಳ: ನೇತ್ರಾವತಿ ನದಿ‌ಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ...!

ಬಂಟ್ವಾಳ: ನೇತ್ರಾವತಿ ನದಿ‌ಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ…!

- Advertisement -
- Advertisement -

ಬಂಟ್ವಾಳ : ಬಂಟ್ವಾಳ ತಾಲೂಕಿನ ಸುಜೀರ್ ಎಂಬಲ್ಲಿನ‌ ನೇತ್ರಾವತಿ ನದಿ‌ಯಲ್ಲಿ ಸುಮಾರು 45-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ‌ ಶವ ಪತ್ತೆಯಾಗಿದ್ದು. ಶವವನ್ನು ಬಂಟ್ವಾಳ ತಾಲೂಕು ಆಸ್ಪತ್ರೆಯ ಶೈತಲೀಕರಣ ಕೇಂದ್ರದಲ್ಲಿ ಇಡಲಾಗಿದೆ.

ಪುದು ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಅವರು ನೇತ್ರಾವತಿ ನದಿಯಲ್ಲಿ ತೇಲಾಡುವ ಸ್ಥಿತಿಯ ವ್ಯಕ್ತಿಯ ಶವದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಆಧಾರದ ಮೇಲೆ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ನದಿಯಿಂದ ಮೇಲಕ್ಕೆ ಎತ್ತಿ, ಮೃತಪಟ್ಟ ವ್ಯಕ್ತಿಯ ವಾರೀಸುದಾರರ ಪತ್ತೆಯಾಗದ ಹಿನ್ನಲೆಯಲ್ಲಿ ಮೃತದೇಹವನ್ನು ಬಂಟ್ವಾಳ ‌ಸರಕಾರಿ ಆಸ್ಪತ್ರೆಯ ಶೈತಲೀಕರಣ ಕೇಂದ್ರದಲ್ಲಿ ಇಡುವ ವ್ಯವಸ್ಥೆ ಮಾಡಿದ್ದಾರೆ.

- Advertisement -

Latest News

error: Content is protected !!