Friday, October 16, 2026
HomeUncategorizedಕೇರಳ; 79 ವರ್ಷದ ವೃದ್ಧೆ ಬರ್ಬರವಾಗಿ ಹತ್ಯೆ ಮಾಡಿ 16 ಪವನ್ ಚಿನ್ನಾಭರಣ ದೋಚಿದ ನೆರೆಮನೆಯಾತ...

ಕೇರಳ; 79 ವರ್ಷದ ವೃದ್ಧೆ ಬರ್ಬರವಾಗಿ ಹತ್ಯೆ ಮಾಡಿ 16 ಪವನ್ ಚಿನ್ನಾಭರಣ ದೋಚಿದ ನೆರೆಮನೆಯಾತ ಬಂಧನ

- Advertisement -
- Advertisement -

ಕೇರಳದ ತ್ರಿಶೂರ್ ಜಿಲ್ಲೆಯ ಕರಾಳಂನಲ್ಲಿ ವೃದ್ಧೆಯೊಬ್ಬರನ್ನು ಕೊಲೆ ಮಾಡಿ, ಮೈಮೇಲಿದ್ದ ಬರೋಬ್ಬರಿ 16 ಪವನ್ (128 ಗ್ರಾಂ) ಚಿನ್ನಾಭರಣಗಳನ್ನು ದೋಚಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತರನ್ನು ಸಾವಿತ್ರಿ (79) ಎಂದು ಗುರುತಿಸಲಾಗಿದೆ. ತ್ರಿಪ್ರಯಾರ್ ನಿವಾಸಿ ಹಾಗೂ ಮೃತರ ನೆರೆಮನೆಯಾತನಾಗಿರುವ ಮೊಹಮ್ಮದ್ ರಫಿ (58) ಬಂಧಿತ ಆರೋಪಿ. ಈತ ಸಾವಿತ್ರಿ ಅವರ ಮಗನಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದನು.

ಘಟನೆಯ ಹಿನ್ನೆಲೆ: ಆರ್ಥಿಕ ಸಂಕಷ್ಟದಲ್ಲಿದ್ದ ರಫಿ, ಈ ಹಿಂದೆ ಸಾವಿತ್ರಿ ಅವರ ಬಳಿ ಚಿನ್ನಾಭರಣ ಕೇಳಿದ್ದ ಎನ್ನಲಾಗಿದೆ. ಆದರೆ ಅವರು ನೀಡಲು ನಿರಾಕರಿಸಿದ್ದರು. ಘಟನೆಯ ದಿನ ಸಾವಿತ್ರಿ ಅವರ ಕುಟುಂಬಸ್ಥರು ಹಿರಿಯರೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ, ವೃದ್ಧೆ ಮನೆಯಲ್ಲಿ ಒಂಟಿಯಾಗಿದ್ದಾರೆಂದ ತಿಳಿದು ಆರೋಪಿ ಒಳನುಗ್ಗಿದ್ದಾನೆ.

ಹಾಲ್‌ನಲ್ಲಿ ಕುಳಿತಿದ್ದ ಸಾವಿತ್ರಿ ಅವರ ಕುತ್ತಿಗೆಯನ್ನು ಸೀರೆಯಿಂದ ಬಿಗಿದು ಹತ್ಯೆಗೈದ ಬಳಿಕ, ಮೃತದೇಹವನ್ನು ಮಲಗುವ ಕೋಣೆಗೆ ಎಳೆದುಕೊಂಡು ಹೋಗಿ ಮುಖದ ಮೇಲೆ ದಿಂಬು ಒತ್ತಿ ಸಾವು ಖಚಿತಪಡಿಸಿಕೊಂಡಿದ್ದಾನೆ. ಬಳಿಕ 16 ಪವನ್ ಚಿನ್ನಾಭರಣಗಳನ್ನು ದೋಚಿ, ಸಾಕ್ಷ್ಯ ನಾಶಪಡಿಸಲು ಮೃತದೇಹದ ಬಳಿ ಮೆಣಸಿನ ಪುಡಿ ಹರಡಿದ್ದನು. ಸಂಜೆ ಶಾಲೆಯಿಂದ ಬಂದ ಮೊಮ್ಮಗಳಿಗೆ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಗಂಭೀರತೆ ಅರಿತು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯ ಹಾಗೂ ಮೊಬೈಲ್ ಟವರ್ ಸಿಗ್ನಲ್ ಆಧರಿಸಿ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.

- Advertisement -

Latest News

error: Content is protected !!