Sunday, October 4, 2026
HomeUncategorizedಉಪ್ಪಿನಂಗಡಿ ಸೇತುವೆ ಮೇಲೆ ಬೈಕ್-ಮೊಬೈಲ್ ಬಿಟ್ಟು ವ್ಯಕ್ತಿ ನಾಪತ್ತೆ

ಉಪ್ಪಿನಂಗಡಿ ಸೇತುವೆ ಮೇಲೆ ಬೈಕ್-ಮೊಬೈಲ್ ಬಿಟ್ಟು ವ್ಯಕ್ತಿ ನಾಪತ್ತೆ

- Advertisement -
- Advertisement -

ಉಪ್ಪಿನಂಗಡಿ: ಅಕ್ಟೋಬರ್ 2ರಂದು ಮನೆ ಹಾಗೂ ಅಂಗಡಿಯಿಂದ ತೆರಳಿದ್ದ ಹಿರೇಬಂಡಾಡಿ ಪೆರಾಬೆ ನಿವಾಸಿ, ಟಯರ್ ಪಂಕ್ಚರ್ ಅಂಗಡಿ ಮಾಲೀಕ ಮಾಧವ ಗೌಡ (44) ಎಂಬುವರು ದಿಢೀರ್ ನಾಪತ್ತೆಯಾಗಿದ್ದಾರೆ.

ಅವರ ಬೈಕ್ ಹಾಗೂ ಮೊಬೈಲ್ ಉಪ್ಪಿನಂಗಡಿಯ ಕುಮಾರಧಾರ ಹಳೆ ಸೇತುವೆಯ ಮೇಲೆ ಪತ್ತೆಯಾಗಿವೆ. ಕಳೆದ 14 ವರ್ಷಗಳಿಂದ ಮಾನಸಿಕ ಖಿನ್ನತೆ ಹಾಗೂ ಮದ್ಯವ್ಯಸನದಿಂದ ಬಳಲುತ್ತಿದ್ದ ಇವರು, ಇತ್ತೀಚೆಗಷ್ಟೇ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರೂ ಮತ್ತೆ ಮದ್ಯಪಾನ ಮಾಡಲು ಪ್ರಾರಂಭಿಸಿದ್ದರೆನ್ನಲಾಗಿದೆ. ಅ.2ರಂದು ಅಂಗಡಿಗೆ ಹೊರಟವರು ವಾಪಸ್ ಬಾರದೇ ಇದ್ದಾಗ ಹುಡುಕಾಟ ನಡೆಸಿದ ವೇಳೆ ಸೇತುವೆ ಮೇಲೆ ವಸ್ತುಗಳು ಪತ್ತೆಯಾಗಿವೆ.

ಘಟನೆ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಾಗೂ ಸ್ಥಳೀಯರು ಶೋಧ ಕಾರ್ಯ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!