- Advertisement -


- Advertisement -
ಬಂಟ್ವಾಳ; ಕಡೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಕುಕ್ಕಳ ಗ್ರಾಮದ ಶಾರದಾ ಮಂಟಪದ ಬಳಿ ಅ. 31ರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಥಳೀಯ ನಿವಾಸಿ ಕಮಲಾಕ್ಷ ಆಚಾರ್ಯ (52) ಚಿಕಿತ್ಸೆ ಫಲಕಾರಿಯಾಗದೆ ನ. 1ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಡಂತ್ಯಾರಿನಿಂದ ಪುಂಜಾಲಕಟ್ಟೆಗೆ ತೆರಳುತ್ತಿದ್ದಾಗ ಕಾರನ್ನು ಓವರ್ಟೇಕ್ ಮಾಡಲು ಬಂದ ಮತ್ತೊಂದು ಬೈಕ್ ಇವರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಈ ಕುರಿತು ಬೈಕ್ ಸವಾರ ನಾಗೇಶ್ ಪೂಜಾರಿ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


