Saturday, June 6, 2026
Homeಅಪರಾಧಕಾಸರಗೋಡು: ಅಕ್ರಮ ಮದ್ಯ ಸಾಗಾಟ; ರಿಕ್ಷಾ ಬಿಟ್ಟು ಚಾಲಕ ಪರಾರಿ!

ಕಾಸರಗೋಡು: ಅಕ್ರಮ ಮದ್ಯ ಸಾಗಾಟ; ರಿಕ್ಷಾ ಬಿಟ್ಟು ಚಾಲಕ ಪರಾರಿ!

- Advertisement -
- Advertisement -

ಕಾಸರಗೋಡು: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನನ್ನು ಪೊಲೀಸರು ಬಂಧಿಸುವ ವೇಳೆ ಪರಾರಿಯಾದ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಮೂಡಂಬೈಲ್ ಪಜಿಂಗಾರ್ ನಲ್ಲಿ ನಡೆದಿದೆ.

ಆಟೋ ರಿಕ್ಷಾದಲ್ಲಿ ಸುಮಾರು 22 ಬಾಕ್ಸ್ ಗಳಲ್ಲಿ 1,050 ಬಾಟಲ್ ಮದ್ಯ ಪತ್ತೆಯಾಗಿದೆ. ಕರ್ನಾಟಕದಿಂದ ಅಕ್ರಮ ಮದ್ಯ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯಂತೆ ಮಂಜೇಶ್ವರ ಠಾಣಾ ಪೊಲೀಸರು ಮೂಡಂಬೈಲ್ ಸಮೀಪ ಆಟೋ ರಿಕ್ಷಾವನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ.



ಪೊಲೀಸರನ್ನು ಕಂಡ ಕೂಡಲೇ ಒಳದಾರಿಯಾಗಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಬೆನ್ನಟ್ಟಿದ್ದು, ಪಜಿಂಗಾರ್ ಎಂಬಲ್ಲಿ ಆಟೋ ರಿಕ್ಷಾವನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಪರಾರಿಯಾದವನ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು,ಈತ ಕರ್ನಾಟಕದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಿ ಹಲವೆಡೆಗೆ ತಲಪಿಸುತ್ತಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!