Monday, May 20, 2024
Homeಕರಾವಳಿಉಡುಪಿಮಲ್ಪೆ: ಬೀಚ್ ಗೆ ಇಳಿಯದಂತೆ ಹಾಕಿದ್ದ ತಡೆಬೇಲಿ ತೆರವು; ಶೀಘ್ರದಲ್ಲಿ ವಾಟರ್‌ ಸ್ಪೋರ್ಟ್ಸ್ ಕೂಡ ಆರಂಭ!

ಮಲ್ಪೆ: ಬೀಚ್ ಗೆ ಇಳಿಯದಂತೆ ಹಾಕಿದ್ದ ತಡೆಬೇಲಿ ತೆರವು; ಶೀಘ್ರದಲ್ಲಿ ವಾಟರ್‌ ಸ್ಪೋರ್ಟ್ಸ್ ಕೂಡ ಆರಂಭ!

spot_img
- Advertisement -
- Advertisement -

ಮಲ್ಪೆ: ಮಳೆಗಾಲದಲ್ಲಿ ಸಮುದ್ರಕ್ಕೆ ಇಳಿಯದಂತೆ ಹಾಕಲಾಗಿದ್ದ ತಡೆಬೇಲಿಯನ್ನು ಇದೀಗ ಮಲ್ಪೆ ಬೀಚ್ ರವಿವಾರ ತೆರವುಗೊಳಿಸುವ ಮೂಲಕ ಪ್ರವಾಸಿಗರಿಗೆ ಆಹ್ವಾನ ನೀಡಿದೆ.

ಮಳೆಗಾಲದಲ್ಲಿ ಕಡಲಿನ ಅಬ್ಬರ ಹೆಚ್ಚಿರುವುದರಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ಮಳೆಗಾಲದಲ್ಲಿ ಬೀಚ್‌ನ ಉದ್ದಕ್ಕೂ ರಿಫ್ಲೆಕ್ಟೆಡ್‌ ಪಟ್ಟಿ ಮತ್ತು ಫಿಶ್‌ನೆಟ್‌ ತಡೆಬೇಲಿಯನ್ನು ಕಟ್ಟಿ ಮುನ್ನೆಚ್ಚರಿಕೆ ವಹಿಸಲಾಗುವುದರ ಜೊತೆಗೆ ಎಚ್ಚರಿಕೆ ಫಲಕಗಳನ್ನು ಕೂಡ ಹಾಕಲಾಗುತ್ತದೆ.ಅಷ್ಟಾಗಿಯೂ ನಿಯಮ ಉಲ್ಲಂಘಿಸಿ ನೀರಿಗಿಳಿದವರಿಗೆ ದಂಡ ವಿಧಿಸಲಾಗುತ್ತಿತ್ತು. ಇದೀಗ ಬೀಚ್‌ ಬಯಲು ರಂಗ ಮಂದಿರದ ನೇರ ಸಮುದ್ರಕ್ಕಿಳಿಯುವಲ್ಲಿ ಅಪಾಯಕಾರಿ ಸುಳಿಗಳಿರುವುದರಿಂದ ಆ ಪ್ರದೇಶವ‌ನ್ನು ಹೊರತುಪಡಿಸಿ ಉಳಿದೆಲ್ಲಡೆ ತಡೆಬೇಲಿಯನ್ನು ತೆರವು ಮಾಡಲಾಗಿದೆ.

ಇನ್ನು ಲಾಕ್‌ಡೌನ್‌ ಸಂಧರ್ಭದಲ್ಲಿ ಸ್ಥಗಿತಗೊಂಡಿದ್ದ ಬೀಚ್‌ ವಾಟರ್‌ ಸ್ಪೋರ್ಟ್ಸ್ ಕೂಡ ರವಿವಾರದಿಂದ ಮತ್ತೆ ಆರಂಭಗೊಳ್ಳಲಿದೆ ಎಂದು ಹೇಳಲಾಗಿದೆ.

ಸುರಕ್ಷತೆಯ ಹಿನ್ನೆಲೆಯಲ್ಲಿ ಈಗಾಗಲೇ ನಾಲ್ವರು ಜೀವರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಬೀಚ್‌ನ ಮುಖ್ಯ ಭಾಗದ ಸ್ವಚ್ಛತ ಕಾರ್ಯ ನಡೆಸಲಾಗಿದೆ. ಅಕ್ಟೋಬರ್‌ 1ರ ವೇಳೆಗೆ ಬೀಚ್‌ ಸಂಪೂರ್ಣವಾಗಿ ತೆರೆದುಕೊಳ್ಳಲಿದೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!