Tuesday, June 30, 2026
Homeಕರಾವಳಿಉಡುಪಿಉಡುಪಿ; ಕಾಂತಾರ-2 ಸಿನಿಮಾ ಕಲಾವಿದರು ಸಾಗುತ್ತಿದ್ದ ಬಸ್ ಪಲ್ಟಿ

ಉಡುಪಿ; ಕಾಂತಾರ-2 ಸಿನಿಮಾ ಕಲಾವಿದರು ಸಾಗುತ್ತಿದ್ದ ಬಸ್ ಪಲ್ಟಿ

- Advertisement -
- Advertisement -

ಉಡುಪಿ; ಕಾಂತಾರ ಸಿನಿಮಾ ಕಲಾವಿದರು ಸಾಗುತ್ತಿದ್ದ ಬಸ್ ಪಲ್ಟಿ ಕೊಲ್ಲೂರು ಮಾರ್ಗದಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ತೆರಳುವಾಗ ಕೊಲ್ಲೂರು ಮಾರ್ಗದಲ್ಲಿ 25 ಕಲಾವಿದರಿದ್ದ ಬಸ್ ಅಪಘಾತವಾಗಿದೆ.  ಬಸ್  ಪಲ್ಟಿ ಆಗಿ ಹಲವರಿಗೆ ಗಾಯವಾಗಿದ್ದು  ಆರು ಜನರಿಗೆ ಗಂಭೀರ ಗಾಯಗಳಾಗಿದ್ದು, ಕುಂದಾಪುರ  ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕರಾವಳಿ ಭಾಗದ ಬೇರೆ ಬೇರೆ ಕಡೆಗಳಲ್ಲಿ ‘ಕಾಂತಾರ ಚಾಪ್ಟರ್​ 1’ ಸಿನಿಮಾಗೆ ಶೂಟಿಂಗ್ ಮಾಡಲಾಗುತ್ತಿದೆ. ವಿವಿಧ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕಲಾವಿದರು ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ‘

ಇನ್ನು ಬಸ್ ಪಲ್ಟಿಯಾದ ಹಿನ್ನಲೆ ಚಾಲಕನ ಮೇಲೆ ಹಲ್ಲೆಗೆ ವಾಹನದಲ್ಲಿದ್ದ ಹುಡುಗರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಬಸ್ ನಲ್ಲಿ ಹುಡುಗರು ವಾಹನ ಚಾಲಕ ನಿರ್ಲಕ್ಷದಿಂದ ವಾಹನ ಚಲಾಯಿಸಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ರಿಷಭ್ ಶೆಟ್ಟಿ ಸಂಧಾನ ನಡೆಸಿದ್ದಾರೆ ನಡೆಸಲಾಗಿದೆ.

- Advertisement -

Latest News

error: Content is protected !!