Saturday, June 6, 2026
Homeತಾಜಾ ಸುದ್ದಿಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತ ಪ್ರಕರಣ;ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೇ...

ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತ ಪ್ರಕರಣ;ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೇ ಸಾವು

- Advertisement -
- Advertisement -

ತುಮಕೂರು; ನಿನ್ನೆ ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಅವರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್ (44) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಕಾರು ಖರೀದಿಸಿದ ಒಂದೇ ವಾರದಲ್ಲಿ ತುಕಾಲಿ ಸಂತೋಷ್ ಕಾರು ಅಪಘಾತವಾಗಿದೆ. ಕಳೆದ ವಾರವಷ್ಟೇ ತುಕಾಲಿ ಬಿಗ್ ಬಾಸ್ ಶೋನಿಂದ ಬಂದ ಹಣದಲ್ಲಿ ಕಾರು ಖರೀದಿಸಿದ್ದರು. ಅದೇ ಕಾರು ನಿನ್ನೆ ತುಮಕೂರು ಜಿಲ್ಲೆಯ ಕುಣಿಗಲ್ ಬಳಿ ಅಪಘಾತವಾಗಿತ್ತು.

ತುಕಾಲಿ ಅವರ ಕಿಯಾ ಕಾರಿಗೆ ಆಟೋ ಚಾಲಕ ಡಿಕ್ಕಿ ಹೊಡೆದಿದ್ದಾರೆ.ತುಕಾಲಿ ಸಂತು ಕಾರಿನ ಬಲಗಡೆಗೆ ಆಟೋ ಚಾಲಕ ಜಗದೀಶ್ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಆಟೋ ಭಾಗಶಃ ಜಖಂ.ಆಗಿದೆ. ತುಕಾಲಿ ಸಂತು ತುಮಕೂರು ಕಡೆಯಿಂದ ಕುಣಿಗಲ್ ಕಡೆ ಹೋಗ್ತಿದ್ದರು. ಕುಣಿಗಲ್ ನಿಂದ ಕುರುಡಿಹಳ್ಳಿ ಗೆ ಆಟೋ ಬರುತ್ತಿತ್ತು. ಇನ್ನು ಆಟೋ ಚಾಲಕ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್ ಅವರನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಅವರು ಸಾವನ್ನಪ್ಪಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!