Saturday, May 4, 2024
Homeತಾಜಾ ಸುದ್ದಿಭಾರತದಲ್ಲಿ ಈ ತಳಿಯ ಶ್ವಾನಗಳ ಸಾಕಾಣಿಕೆಗಿಲ್ಲ ಅವಕಾಶ; 23 ಶ್ವಾನ ತಳಿಗಳಿಗೆ ನಿಷೇಧ ಹೇರಿದ ಕೇಂದ್ರ...

ಭಾರತದಲ್ಲಿ ಈ ತಳಿಯ ಶ್ವಾನಗಳ ಸಾಕಾಣಿಕೆಗಿಲ್ಲ ಅವಕಾಶ; 23 ಶ್ವಾನ ತಳಿಗಳಿಗೆ ನಿಷೇಧ ಹೇರಿದ ಕೇಂದ್ರ ಸರ್ಕಾರ

spot_img
- Advertisement -
- Advertisement -

ನವದೆಹಲಿ; ಕೇಂದ್ರ ಸರ್ಕಾರ ಶ್ವಾನ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ. ಇತ್ತೀಚೆಗೆ ದೇಶದಲ್ಲಿ ಪ್ರಮುಖ ಬ್ರೀಡ್ ಗಳು ಎಂದು ಕರೆಸಿಕೊಳ್ಳುವ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ 23 ನಾಯಿ ತಳಿಯನ್ನು ನಿಷೇಧಿಸಿದೆ.

23 ಶ್ವಾನ ತಿಳಿಗಳ ಆಮದು, ಮಾರಾಟ, ಸಂತಾನೋತ್ಪತ್ತಿ ಮೇಲೂ ನಿಷೇಧ ಹೇರಿದೆ.ದೆಹಲಿ ಹೈಕೋರ್ಟ್​ ಆದೇಶಕ್ಕೆ ಸರಿಯಾಗಿ ಪ್ರಾಣಿ ಕಲ್ಯಾಣ ಸಂಸ್ಥೆಗಳ ಜಂಟಿ ಸಮಿತಿಯ ವರದಿಯನ್ನು ಅನುಸರಿಸಿ ಈ ನಿರ್ಣಯ ಕೈಗೊಂಡಿದೆ. ಇದರ ಜೊತೆಗೆ ಪಶುಸಂಗೋಪನೆ ಅಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾದ ತಜ್ಞರ ಸಮಿತಿಯು ಅಪಾಯಕಾರಿ ನಾಯಿಗಳ ಆಮದನ್ನು ನಿಷೇಧಿಸಲು ಶಿಫಾರಸು ಮಾಡಿದೆ.

ನಿಷೇಧಿದ ಶ್ವಾನದ ತಳಿಗಳು ಯಾವುವು?

ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಬೋರ್‌ಬೋಲ್, ಕಂಗಲ್, ಸೆಂಟ್ರಲ್ ಏಷ್ಯನ್ ಶೆಫರ್ಡ್ ಡಾಗ್, ಕಕೇಶಿಯನ್ ಶೆಫರ್ಡ್ ಡಾಗ್, ಸೌತ್ ರಷ್ಯನ್ ಶೆಫರ್ಡ್, ಟೊರ್ನ್‌ಜಾಕ್, ಟೊಸಪ್ಲಾನಿನಾಕ್, ಮಾಸ್ಟಿಫ್ಸ್, ರೊಟ್‌ವೀಲರ್, ಟೆರಿಯರ್‌ಗಳು, ರೊಡೇಸಿಯನ್ ರಿಡ್ಜ್‌ಬ್ಯಾಕ್, ವುಲ್ಫ್ ಡಾಗ್ಸ್, ಕೆನಾರಿಯೊ, ಅಕ್ಬಾಶ್ ಡಾಗ್, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ ಈ ತಳಿಯ ಸಾಕಾಣಿಕೆಗೆ ನಿಷೇಧ ಹೇರಿದೆ.

- Advertisement -
spot_img

Latest News

error: Content is protected !!