Friday, June 5, 2026
Homeಕರಾವಳಿಮಂಗಳೂರು: ಕರಾವಳಿಯ ನೈಜ ಘಟನೆ ಆಧರಿಸಿ ಚಿತ್ರ ನಿರ್ಮಾಣ ಆರೋಪ; ಕನ್ನಡದ ಮೆಹಬೂಬ ಸಿನಿಮಾ ಬಿಡುಗಡೆಗೆ...

ಮಂಗಳೂರು: ಕರಾವಳಿಯ ನೈಜ ಘಟನೆ ಆಧರಿಸಿ ಚಿತ್ರ ನಿರ್ಮಾಣ ಆರೋಪ; ಕನ್ನಡದ ಮೆಹಬೂಬ ಸಿನಿಮಾ ಬಿಡುಗಡೆಗೆ ಮುಸ್ಲಿಂ ಸಮುದಾಯ ವಿರೋಧ‌

- Advertisement -
- Advertisement -

ಮಂಗಳೂರು: ಕರಾವಳಿಯ ನೈಜ ಘಟನೆ ಆಧರಿಸಿ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಕನ್ನಡದ ಮೆಹಬೂಬ ಸಿನಿಮಾ ಬಿಡುಗಡೆಗೆ ಮುಸ್ಲಿಂ ಸಮುದಾಯ ವಿರೋಧ‌ ವ್ಯಕ್ತಪಡಿಸಿದೆ.

ಮುಸ್ಲಿಂ ಸಮುದಾಯ ಹಾಗೂ ವಿದ್ಯಾರ್ಥಿ ಸಂಘದಿಂದ ವಿರೋಧ ವ್ಯಕ್ತವಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ವಿರುದ್ಧ ಆಕ್ರೋಶ‌ ವ್ಯಕ್ತವಾಗುತ್ತಿದೆ.ಇನ್ನು ನಾಳೆ ಮೆಹಬೂಬ ಸಿನಿಮಾ ರಿಲೀಸ್ ಆಗುತ್ತಿದ್ದು, ನಾಳೆ ಸಿನಿಮಾ ಬಿಡುಗಡೆ ಮಾಡಬಾರದು ಅಂತಾ ಸಿಎಂ ಗೆ ಟ್ವೀಟ್ ಮೂಲಕ All college students association ಮನವಿ ಮಾಡಿದೆ.

ನಾಳೆ ರಿಲೀಸ್ ಮಾಡಿದ್ರೆ ಕಂಡ ಕಂಡಲ್ಲಿ ಸಿನಿಮಾ ತಂಡಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ಕೊಡಲಾಗಿದೆ.ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಹೋಗಿ ಮುತ್ತಿಗೆ ಹಾಕುವ ಎಚ್ಚರಿಕೆ ಕೊಡಲಾಗಿದೆ. ಮೆಹಬೂಬಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಅಭಿನಯದ ಚಿತ್ರವಾಗಿದೆ.

- Advertisement -

Latest News

error: Content is protected !!