Friday, May 3, 2024
Homeತಾಜಾ ಸುದ್ದಿವ್ಯಕ್ತಿಯ ಕಿಡ್ನಿಯಲ್ಲಿತ್ತು ಬರೋಬ್ಬರಿ 418 ಕಲ್ಲುಗಳು; ಕಿಡ್ನಿ ಸ್ಟೋನ್ಸ್ ನೋಡಿ ವೈದ್ಯರೇ ಸುಸ್ತೋ ಸುಸ್ತು

ವ್ಯಕ್ತಿಯ ಕಿಡ್ನಿಯಲ್ಲಿತ್ತು ಬರೋಬ್ಬರಿ 418 ಕಲ್ಲುಗಳು; ಕಿಡ್ನಿ ಸ್ಟೋನ್ಸ್ ನೋಡಿ ವೈದ್ಯರೇ ಸುಸ್ತೋ ಸುಸ್ತು

spot_img
- Advertisement -
- Advertisement -

ಹೈದರಾಬಾದ್‌: ಕಿಡ್ನಿಯಲ್ಲಿ ಒಂದು ಸಣ್ಣ ಸ್ಟೋನ್ ಇದ್ರೆ ಸಾಕು ಅದರ ನೋವು ಸಹಿಸೋಕೆ ಅಸಾಧ್ಯ.ಅಂತಹದ್ರಲ್ಲಿ ಕಿಡ್ನಿಯಲ್ಲಿ 418 ಇದ್ರೆ ಆ ವ್ಯಕ್ತಿ ಸ್ಥಿತಿ ಹೇಗಿರಬೇಡ ಹೇಳಿ.

ಹೈದರಾಬಾದ್‌ನ ಏಷಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ನೆಫ್ರಾಲಜಿ ಮತ್ತು ಯುರಾಲಜಿ ಆಸ್ಪತ್ರೆಗೆ 60 ವರ್ಷದ ವ್ಯಕ್ತಿಯೊಬ್ಬರು ಕಿಡ್ನಿ ಸ್ಟೋನ್ ಸಮಸ್ಯೆಯಿಂದಾಗಿ ದಾಖಲಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವೇಳೆ ವೈದ್ಯರೇ ಬರೋಬ್ಬರಿ 418 ಸ್ಟೋನ್ ಗಳನ್ನು ನೋಡಿ ಶಾಕ್ ಆಗಿದ್ದಾರೆ.ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ಸಮಯದಲ್ಲಿ ವ್ಯಕ್ತಿಯ ಮೂತ್ರಪಿಂಡ ಶೇ.27ರಷ್ಟು ಮಾತ್ರ ಕೆಲಸ ಮಾಡುತ್ತಿತ್ತು ಎಂದು ಅವರು ತಿಳಿಸಿದ್ದಾರೆ.ಅತ್ಯಾಧುನಿಕ ಸಲಕರಣೆಗಳನ್ನು ಬಳಕೆ ಮಾಡುವ ಮೂಲಕ ವೈದ್ಯರು ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ.

ಸವಾಲನ್ನು ಎದುರಿಸಿದ ವೈದ್ಯರು ಸಾಂಪ್ರದಾಯಿಕ ವಿಧಾನಕ್ಕಿಂತ ಹೆಚ್ಚು ಪರಿಣಾಣಕಾರಿ ವಿಧಾನವನ್ನು ಆರಿಸಿಕೊಂಡರು. ಡಾ.ಕೆ. ಪೂರ್ಣ ಚಂದ್ರ ರೆಡ್ಡಿ, ಡಾ. ಗೋಪಾಲ್ ಆರ್ತಕ್ ಮತ್ತು ಡಾ. ದಿನೇಶ್ ಎಂ. ನೇತೃತ್ವದ ತಂಡವು ಕನಿಷ್ಠ ಆಕ್ರಮಣಕಾರಿ ತಂತ್ರವಾದ ಪೆರ್ಕ್ಯುಟೇನಿಯಸ್ ನೆಫ್ರೊಲಿಥೊಟೊಮಿಯನ್ನು ಬಳಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!