Thursday, June 4, 2026
Homeಕರಾವಳಿಉಡುಪಿಉಡುಪಿ : ಸೆಕೆಯೆಂದು ಮನೆ ಟೆರೇಸ್ ನಲ್ಲಿ ಮಲಗಿದ್ದ ಮುಖ್ಯ ಶಿಕ್ಷಕ ಕೆಳಗೆ ಬಿದ್ದು ಸಾವು

ಉಡುಪಿ : ಸೆಕೆಯೆಂದು ಮನೆ ಟೆರೇಸ್ ನಲ್ಲಿ ಮಲಗಿದ್ದ ಮುಖ್ಯ ಶಿಕ್ಷಕ ಕೆಳಗೆ ಬಿದ್ದು ಸಾವು

- Advertisement -
- Advertisement -

ಉಡುಪಿ : ಸೆಕೆಯೆಂದು ಮನೆ ಟೆರೇಸ್ ನಲ್ಲಿ ಮಲಗಿದ್ದ ಮುಖ್ಯ ಶಿಕ್ಷಕ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯ ಅಜೆಕಾರು ಸಮೀಪದ ಎಣ್ಣೆಹೊಳೆಯಲ್ಲಿ ನಡೆದಿದೆ.

ಎಣ್ಣೆಹೊಳೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುಂದರ್‌ ನಾಯ್ಕ (55) ಮೃತ ಶಿಕ್ಷಕ. ನಿನ್ನೆ ತೀವ್ರ ಸೆಕೆ ಹಿನ್ನೆಲೆಯಲ್ಲಿ ಸುಂದರ್‌ ನಾಯ್ಕ ಮನೆಯ ಟೆರೇಸ್ ಮೇಲೆ ಮಲಗಿದ್ದರು. ಗಾಢ ನಿದ್ರೆಯಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿರಬಹುದು ಅಂತ ಶಂಕಿಸಲಾಗಿದೆ.

ಎಂದಿನಂತೆ ಬೆಳಗ್ಗೆ 6.30ರ ವೇಳೆಗೆ ಮನೆಯವರು ಹೊರಗೆ ಬಂದು ನೋಡಿದಾಗ ಸುಂದರ್‌ ನಾಯ್ಕ ಕೆಳಗೆ ಬಿದ್ದು ಮೃತಪಟ್ಟಿದ್ದರು.

- Advertisement -

Latest News

error: Content is protected !!