Sunday, October 18, 2026
Homeಕರಾವಳಿಜಿಲ್ಲೆಯ ಜನರ ಬೇಡಿಕೆಗಳು ಈಡೇರುವವರೆಗೆ ಎಂಆರ್‌ಪಿಎಲ್ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು; ಎಂಆರ್‌ಪಿಎಲ್ ಗೆ ಎಚ್ಚರಿಕೆ...

ಜಿಲ್ಲೆಯ ಜನರ ಬೇಡಿಕೆಗಳು ಈಡೇರುವವರೆಗೆ ಎಂಆರ್‌ಪಿಎಲ್ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು; ಎಂಆರ್‌ಪಿಎಲ್ ಗೆ ಎಚ್ಚರಿಕೆ ನೀಡಿದ ಸತ್ಯಜಿತ್ ಸುರತ್ಕಲ್

- Advertisement -
- Advertisement -

ಸುರತ್ಕಲ್: ಕಳುವಾರು ಮತ್ತು ಕುತ್ತೆತ್ತೂರು ಭಾಗದ ಜನರು ಹಾಗೂ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಜಿಲ್ಲೆಯ ಜನರ ಬೇಡಿಕೆಗಳು ಈಡೇರುವವರೆಗೆ ಎಂಆರ್‌ಪಿಎಲ್ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಎಚ್ಚರಿಕೆ ನೀಡಿದ್ದಾರೆ.

ಕುತ್ತೆತ್ತೂರಿನಲ್ಲಿ ರವಿವಾರ ನಡೆದ ಎಂಆರ್‌ಪಿಎಲ್ ನಾಲ್ಕನೇ ಹಂತದ ನಿರ್ವಸಿತರ ಸಭೆಯಲ್ಲಿ ಮಾತನಾಡಿದ ಅವರು, ಎಂಆರ್‌ಪಿಎಲ್‌ಗಾಗಿ ಭೂಮಿ ಕಳೆದುಕೊಂಡ ನಿರ್ವಸಿತರು, ಕಳುವಾರು ಸಂತ್ರಸ್ತರು ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಜಂಟಿ ಕ್ರಿಯಾ ಸಮಿತಿ ಹೋರಾಟದ ನೇತೃತ್ವ ವಹಿಸಿದೆ. ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಯಲಿದ್ದು, ಜನರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಸರ್ಕಾರ ಮತ್ತು ಎಂಆರ್‌ಪಿಎಲ್ ಅಧಿಕಾರಿಗಳ ಮೇಲಿದೆ ಎಂದರು.

ಕ್ರಿಯಾ ಸಮಿತಿಯ ಶಶಿರಾಜ್ ಕೊಳಂಬೆ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ನಿರ್ವಸಿತರ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ, ಸಂಚಾಲಕ ಡೋನಿ ಸುವಾರಿಸ್, ಪ್ರವೀಣ್ ಕುಮಾರ್, ಗುರುಪ್ರಸಾದ್ ಭಟ್ ಸೇರಿದಂತೆ ನಿರ್ವಸಿತ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದು, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

- Advertisement -

Latest News

error: Content is protected !!