Friday, May 17, 2024
Homeತಾಜಾ ಸುದ್ದಿಹಾಸನ ಪೆನ್ ಡ್ರೈವ್ ಪ್ರಕರಣ; ಪ್ರಜ್ವಲ್ ರೇವಣ್ಣ  ವಿರುದ್ಧ  ಲುಕ್ ಔಟ್ ನೋಟಿಸ್ ಜಾರಿ

ಹಾಸನ ಪೆನ್ ಡ್ರೈವ್ ಪ್ರಕರಣ; ಪ್ರಜ್ವಲ್ ರೇವಣ್ಣ  ವಿರುದ್ಧ  ಲುಕ್ ಔಟ್ ನೋಟಿಸ್ ಜಾರಿ

spot_img
- Advertisement -
- Advertisement -

 ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಸದ ಪ್ರಜ್ವಲ್ ರೇವಣ್ಣ  ವಿರುದ್ಧ  ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.

 ವಿಶ್ವದ ಎಲ್ಲ ಏರ್ಪೋರ್ಟ್ ಗಲ್ಲಿ ಪ್ರಜ್ವಲ್ ರೇವಣ್ಣ ಮೇಲೆ ನಿಗಾ ಇಡಲಾಗ್ತಿದೆ. ಏರ್ಪೋರ್ಟ್ ಹಾಗು ಇಂಟರ್ಪೋಲ್ ( ಅಂತರ್ ರಾಷ್ಟೀಯ ತನಿಖಾ ಸಂಸ್ಥೆ ಗು SIT ಲುಕ್ ಔಟ್ ನೋಟೀಸ್ ರವಾನೆ ಮಾಡಿದೆ. ಯಾವುದೇ ಏರ್ಪೋರ್ಟ್ ನಲ್ಲಿ ಪ್ರಜ್ವಲ್ ಕಣ್ಣಿಗೆ ಬಿದ್ರು, ಅವರನ್ನ ವಶಕ್ಕೆ ಪಡೆಯಲು ಎಸ್ ಐಟಿ ಸೂಚನೆ ನೀಡಿದೆ.

 ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಲ್ಲಿರುವುದರ ಬಗ್ಗೆ ಈಗಾಗಲೇ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಎಸ್ ಐಟಿ ನೀಡಿದ ಲುಕ್ ಔಟ್ ನೋಟೀಸ್ ಬಳಿಕವೂ ಪ್ರಜ್ವಲ್ ಪತ್ತೆಯಾಗದಿದ್ದರೆ, ಅವರ ಪತ್ತೆಗೆ ಜಾಮೀನು ರಹಿತ ವಾರಂಟ್ ಜಾರಿಯಾಗೋ ಸಾಧ್ಯತೆ ಇದೆ ಎನ್ನಲಾಗಿದೆ.

 ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಅವರು ಎಸ್‌ಐಟಿ ಮುಂದೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ನೋಟಿಸ್ ನೀಡಿದಂತೆ ಅವರು (ಎಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ) ಹಾಜರಾಗಬೇಕು. ಅವರು ಹಾಜರಾಗದಿದ್ದರೆ, ಅವರನ್ನು ಬಂಧಿಸಲಾಗುವುದು” ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!