Thursday, June 4, 2026
Homeಕರಾವಳಿಮಂಗಳೂರುಉಳ್ಳಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಬೇಲಿ ರಾತ್ರೋ ರಾತ್ರಿ ನೆಲಸಮ

ಉಳ್ಳಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಬೇಲಿ ರಾತ್ರೋ ರಾತ್ರಿ ನೆಲಸಮ

- Advertisement -
- Advertisement -

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿಯ ತಡೆಬೇಲಿಯನ್ನು ರಾತ್ರೋ ರಾತ್ರಿ ನೆಲಸಮ ಮಾಡಿರುವ ಘಟನೆ ಉಳ್ಳಾಲ ತಾಲೂಕಿನ ಕೆ.ಸಿ. ರೋಡ್ ಬಳಿ ನಡೆದಿದೆ.ಹೆದ್ದಾರಿ ಮತ್ತು ಸರ್ವಿಸ್ ರಸ್ತೆ ನಡುವೆ ಇದ್ದ ಕಬ್ಬಿಣದ ತಡೆಬೇಲಿಯನ್ನು ಅರ್ಥ್ ಮೂವರ್ ಬಳಸಿ ಕೆಡವಿ ಹಾಕಲಾಗಿದೆ.

ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಇರುವ ಹಿಂದೂಸ್ಥಾನ್ ಪೆಟ್ರೋಲಿಯಂ ಪೆಟ್ರೋಲ್ ಬಂಕ್ ಗೆ ಅನುಕೂಲವಾಗುವಂತೆ ಕೃತ್ಯ‌ ನಡೆಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಘಟನೆ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆಗೆ ಧಕ್ಕೆ ಹಾಗೂ ಆರ್ಥಿಕ ನಷ್ಟ ಎಂಬ ಆರೋಪದಡಿ ಎ‌.ಹೆಚ್. ಫ್ಯೂಯೆಲ್ ಮತ್ತು ಸರ್ವಿಸಸ್ ಕಂಪನಿ ವಿರುದ್ಧ ರಸ್ತೆ ನಿರ್ವಹಣಾ ಸಂಸ್ಥೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

- Advertisement -

Latest News

error: Content is protected !!