Sunday, May 19, 2024
Homeಇತರಇಂದಿನಿಂದ ಕೊರೊನಾ ಸಂಬಂಧಿತ ಜಿಲ್ಲಾ ಹೆಲ್ತ್ ಬುಲೆಟಿನ್ ಸ್ಥಗಿತ

ಇಂದಿನಿಂದ ಕೊರೊನಾ ಸಂಬಂಧಿತ ಜಿಲ್ಲಾ ಹೆಲ್ತ್ ಬುಲೆಟಿನ್ ಸ್ಥಗಿತ

spot_img
- Advertisement -
- Advertisement -

ಬೆಂಗಳೂರು : ಇಷ್ಟು ದಿನ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಆರೋಗ್ಯ ಬುಲೆಟಿನ್ ಅನ್ನು ಪ್ರಕಟಿಸಲಾಗುತ್ತಿತ್ತು. ಆದರೆ ಈ ಆರೋಗ್ಯ ಬುಲೆಟಿನ್  ಸ್ಥಗಿತಗೊಳ್ಳಲಿದೆ. ರಾಜ್ಯಮಟ್ಟದಲ್ಲಿ ಎಲ್ಲಾ ಜಿಲ್ಲೆಗಳ ಮಾಹಿತಿಯನ್ನು ಸೇರಿಸಿ ದಿನಕ್ಕೆ ಒಂದು ಬುಲೆಟಿನ್ ಪ್ರಕಟವಾಗಲಿದೆ. ಆರೋಗ್ಯ ಇಲಾಖೆ ರಾಜ್ಯದ ಕೊರೊನಾ ವೈರಸ್ ಅಂಕಿ ಅಂಶಗಳ ಕುರಿತು ಒಂದು ಬುಲೆಟಿನ್‌ ಅನ್ನು ಪ್ರತಿದಿನ ಸಂಜೆ ಬಿಡುಗಡೆ ಮಾಡುತ್ತದೆ. ಆದರೆ, ಪ್ರತಿ ಜಿಲ್ಲೆಗಳು ಸಹ ಜಿಲ್ಲಾ ಮಟ್ಟದಲ್ಲಿ ಬುಲೆಟಿನ್ ನೀಡುತ್ತಿದ್ದವು. ಇನ್ನು ಜಿಲ್ಲಾ ಬುಲೆಟಿನ್  ಇರುವುದಿಲ್ಲ.

ಹೊಸ ಪ್ರಕರಣ, ಮರಣ ಹೊಂದಿದವರ ಸಂಖ್ಯೆ, ಸಕ್ರಿಯ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸಿ ಜಿಲ್ಲೆಗಳು 4 ಗಂಟೆ ಸುಮಾರಿಗೆ ಬುಲೆಟಿನ್ ಹೊರಡಿಸುತ್ತಿದ್ದವು. ಜಿಲ್ಲೆಗಳಿಂದ ಬರುವ ಮಾಹಿತಿ ಸಂಗ್ರಹಿಸಿ ರಾಜ್ಯಮಟ್ಟದ ಬುಲೆಟಿನ್ ಸಂಜೆ 7 ಗಂಟೆ ಸುಮಾರಿಗೆ ಬಿಡುಗಡೆ ಆಗುತ್ತಿತ್ತು. ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬಿಡುಗಡೆ ಮಾಡುವ ಮಾಹಿತಿಯಲ್ಲಿ ಕೆಲವು ಬದಲಾವಣೆಗಳು ಆಗಿ ಗೊಂದಲ ಉಂಟಾಗುತ್ತಿತ್ತು. ರಾಜ್ಯಮಟ್ಟದಲ್ಲಿಯೇ ಜಿಲ್ಲಾ ಮಟ್ಟದ ಮಾಹಿತಿಯನ್ನು ಪ್ರಕಟಿಸುವುದಾಗಿ ಸರ್ಕಾರ ಹೇಳಿದೆ.

ಆದ್ದರಿಂದ, ಜಿಲ್ಲೆಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಜಿಲ್ಲಾ ಬುಲೆಟಿನ್ ಸ್ಥಗಿತಗೊಳಿಸಲಿವೆ. ಪ್ರತಿ ದಿನ ಸಂಜೆ 7 ಗಂಟೆ ಸುಮಾರಿಗೆ ಪ್ರಕಟವಾಗುವ ರಾಜ್ಯ ಬುಲೆಟಿನ್‌ನಲ್ಲಿಯೇ ಜಿಲ್ಲೆಯಲ್ಲಿನ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಪ್ರಕಟವಾಗಲಿದೆ.

- Advertisement -
spot_img

Latest News

error: Content is protected !!