Thursday, June 4, 2026
Homeಕರಾವಳಿಶಿಬಾಜೆ: ಇಂಟರ್ ನೆಟ್ ಸೇವೆಯಿಂದ ವಂಚಿತರಾದ ಪೆರ್ಲ ನಿವಾಸಿಗಳು.. ಕೂಡಲೆ ಕ್ರಮಕ್ಕೆ ಗ್ರಾಮಸ್ಥರ‌ ಒತ್ತಾಯ

ಶಿಬಾಜೆ: ಇಂಟರ್ ನೆಟ್ ಸೇವೆಯಿಂದ ವಂಚಿತರಾದ ಪೆರ್ಲ ನಿವಾಸಿಗಳು.. ಕೂಡಲೆ ಕ್ರಮಕ್ಕೆ ಗ್ರಾಮಸ್ಥರ‌ ಒತ್ತಾಯ

- Advertisement -
- Advertisement -

ಶಿಬಾಜೆ: ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ ಭಾಗವು ಸುಮಾರು 400 ಮಿಕ್ಕಿ ಕುಟುಂಬ ಹೊಂದಿದೆ. ಇಲ್ಲಿ ಸರಕಾರಿ ಶಾಲೆ ಉತ್ತಮ ಹೆಸರು ಗಳಿಸಿದೆ. ಸಮೀಪದಲ್ಲಿ ಅಂಗನವಾಡಿ, ಹಾಲು ಉತ್ಪಾದಕರ ಸಂಘ ಇದೆ. ಇಲ್ಲಿ ಮುಖ್ಯವಾಗಿ ರೈತರು, ವಿದ್ಯಾರ್ಥಿಗಳು , ಕಾರ್ಮಿಕರು‌ ಇರುವ ಪ್ರದೇಶ. ಕಳೆದ ಸುಮಾರು 6,7 ವರ್ಷದಿಂದ ಇಲ್ಲಿ ಪೊನ್ ಟವರ್ ಆಗಬೆಕೆಂದು ಗ್ರಾಮಸ್ತರ ಒತ್ತಾಯ. ಈ ಕುರಿತು 6,7 ವರ್ಷದ ಪ್ರಯತ್ನ ಫಲ ನೀಡಲಿಲ್ಲ. ಜನಪ್ರತಿನಿಧಿಗಳಿಗೂ ಒತ್ತಾಯ ಮಾಡುತ್ತಲೆ ಬಂದಿದ್ದಾರೆ. ಯಾವುದೆ ದೂರವಾಣಿ ಸಂಪರ್ಕ ಇಲ್ಲದೆ ವಿದ್ಯಾರ್ಥಿಗಳಿಗೆ, ರೈತರಿಗೆ ತೊಂದರೆ ಆಗಿದೆ.

ನೆಟ್ ವರ್ಕ್ ಇಲ್ಲದೆ ವಿದ್ಯಾರ್ಥಿಗಳು, ಶಾಲೆ, ಸರಕಾರಿ,ಖಾಸಗಿ ನಿತ್ಯ ದುಡಿಯುವ ವ್ಯಕ್ತಿ ಗಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ನೆಟ್ ವರ್ಕ್ ಬೇಕಿದ್ದ ಲ್ಲಿ ಸುಮಾರು 5 ಕಿಮೀ ಹೋಗಬೇಕು. ತಪ್ಪಿದ್ದಲ್ಲಿ ಎತ್ತರದ ಗುಡ್ದ ಹತ್ತಬೆಕು. ಆದುನಿಕ ಯುಗದಲ್ಲಿ, ತಂತ್ರಜ್ಞಾನ ಯುಗದಲ್ಕೂ ಈ ರೀತಿಯ ವ್ಯವಸ್ಥೆ ಬಗ್ಗೆ ಜನ ತೀವ್ರ ಬೇಸರ ವ್ಯಕ್ತ ಪಡಿಸುತ್ತಿದ್ದು ಮಾನ್ಯ ಜನಪ್ರತಿನಿಧಿಗಳು ಕೂಡಲೆ ಈ ಕುರಿತು ಗಮನಹರಿಸಬೇಕೆನ್ನುವುದು ಗ್ರಾಮಸ್ಥರ ಆಗ್ರಹ.

- Advertisement -

Latest News

error: Content is protected !!