Wednesday, July 15, 2026
HomeUncategorizedಮಂಗಳೂರಿನ ಸೊಸೆಯಾದ ಥೈಲ್ಯಾಂಡ್ ವಧು; ಮಂಗಳಾದೇವಿ ದೇವಸ್ಥಾನದಲ್ಲಿ ವಿವಾಹ

ಮಂಗಳೂರಿನ ಸೊಸೆಯಾದ ಥೈಲ್ಯಾಂಡ್ ವಧು; ಮಂಗಳಾದೇವಿ ದೇವಸ್ಥಾನದಲ್ಲಿ ವಿವಾಹ

- Advertisement -
- Advertisement -

ಮಂಗಳೂರು: ಮಂಗಳೂರಿನ ಯುವಕನೊಂದಿಗೆ ಥೈಲ್ಯಾಂಡ್ ದೇಶದ ಯುವತಿ ಸಪ್ತಪದಿ ತುಳಿದಿದ್ದು ಇಂದು ಮಂಗಳೂರಿನಲ್ಲಿ ವಿವಾಹ ಕಾರ್ಯ ನೆರವೇರಿದೆ.

ಮಂಗಳೂರಿನ ವರ ಪೃಥ್ವಿರಾಜ್ ಹಾಗೂ ಥೈಲ್ಯಾಂಡ್ ವಧು ಮೊಂತಕಾನ್ ಸಸೂಕ್ ವಿವಾಹ ಇಂದು ಮಂಗಳಾದೇವಿ ದೇವಸ್ಥಾನದಲ್ಲಿ ನೆರವೇರಿದೆ.

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಪೃಥ್ವಿರಾಜ್ ಅವರಿಗೆ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದ ವೇಳೆ ಮೊಂತಕಾನ್ ಸಸೂಕ್ ಅವರೊಂದಿಗೆ ಪ್ರೇಮಾಂಕುರವಾಗಿತ್ತು.‌

ನಂತರ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಕಳೆದ ಜುಲೈನಲ್ಲಿ ಥೈಲ್ಯಾಂಡ್ ನಲ್ಲಿ ಬೌದ್ಧ ಧರ್ಮದ ಸಂಪ್ರದಾಯದ ಅನುಸಾರವಾಗಿ ವಿವಾಹ ನಡೆದಿತ್ತು. ಇಂದು ವರ ಪೃಥ್ವಿರಾಜ್ ಕುಟುಂಬಸ್ಥರ ಸಮ್ಮುಖದಲ್ಲಿ ಮಂಗಳೂರಿನಲ್ಲಿ ಹಿಂದೂ ಧರ್ಮದ ಸಂಪ್ರದಾಯದಂತೆ ಮದುವೆ ನಡೆದಿದೆ.

- Advertisement -

Latest News

error: Content is protected !!