- Advertisement -
![]()
- Advertisement -
ಸುಳ್ಯ: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಅಜ್ಜನ ಅಸ್ಥಿಪಂಜರ ಮನೆ ಸಮೀಪವೇ ಪತ್ತೆಯಾಗಿರುವ ಘಟನೆ ಸೇವಾಜೆ ಎಂಬಲ್ಲಿ ನಡೆದಿದೆ. ಸೇವಾಜೆಯ ಬೆಳ್ಯಪ್ಪ ಗೌಡ (85) ಸಾವನ್ನಪ್ಪಿದ ವೃದ್ಧ.
ಸೇವಾಜೆಯ ಬೆಳ್ಯಪ್ಪ ಗೌಡ ಅವರು ದಿಢೀರ್ ನಾಪತ್ತೆಯಾಗಿದ್ದರು. ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಸುಳ್ಯದ ಪ್ರಗತಿ ಆಂಬ್ಯುಲೆನ್ಸ್ ಚಾಲಕ ಅಚ್ಚು, ಮುತ್ತಪ್ಪನ್ ಆಂಬ್ಯುಲೆನ್ಸ್ ಚಾಲಕ ಅಭಿಲಾಷ್ ಹಾಗೂ ಶೌರ್ಯ ವಿಪತ್ತು ದಳದ ಚಿದಾನಂದ ಮೂಡನಕಜೆ ಒಳಗೊಂಡ ತಂಡ ಕಳೆದ 45 ದಿನಗಳಿಂದ ನಿರಂತರ ಶೋಧ ಕಾರ್ಯ ನಡೆಸಿದ್ದರು. ಆದರೂ ಬೆಳ್ಯಪ್ಪ ಗೌಡ ಅವರ ಸುಳಿವು ಸಿಕ್ಕಿರಲಿಲ್ಲ.
ಆದರೆ ಇದೀಗ ಅಚ್ಚರಿ ಅನ್ನೋ ರೀತಿ ಬೆಳ್ಯಪ್ಪ ಗೌಡ ಅವರ ತಲೆ ಬುರುಡೆ ಹಾಗೂ ಪಳೆಯುವಿಕೆ ಮನೆಯ ಸಮೀಪದ ಬಿದಿರು ಹಿಂಡಿಲಿನಲ್ಲಿ ಕಂಡು ಬಂದಿದೆ. ಸ್ಥಳೀಯರು ಕೆಲಸಕ್ಕೆಂದು ಹೋಗುತ್ತಿದ್ದಾಗ ತಲೆ ಬುರುಡೆ ಪತ್ತೆಯಾಗಿದೆ. ಆ ಮೂಲಕ ಬೆಳ್ಯಪ್ಪ ಗೌಡ ಏನಾದರೂ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
- Advertisement -


