Sunday, May 5, 2024
Homeತಾಜಾ ಸುದ್ದಿ'ಲಾಕ್ ಡೌನ್' ನಡುವೆ ಹಸೆಮಣೆ ಏರಲಿರುವ​ ನಟ ನಿಖಿಲ್​ಸಿದ್ಧಾರ್ಥ್

'ಲಾಕ್ ಡೌನ್' ನಡುವೆ ಹಸೆಮಣೆ ಏರಲಿರುವ​ ನಟ ನಿಖಿಲ್​ಸಿದ್ಧಾರ್ಥ್

spot_img
- Advertisement -
- Advertisement -

ಇತ್ತೀಚೆಗೆ ನಟ ನಿಖಿಲ್​ ಕುಮಾರ ಸ್ವಾಮಿ ಮತ್ತು ರೇವತಿ ಸರಳವಾಗಿ ವಿವಾಹವಾಗಿದ್ದರು. ಇದೀಗ ಟಾಲಿವುಡ್​ ನಟ ನಿಖಿಲ್​ಸಿದ್ಧಾರ್ಥ್​​​​​ ವಿವಾಹವಾಗುತ್ತಿದ್ದಾರೆ. ಗೆಳತಿ ಪಲ್ಲವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಮಾಹಿತಿಗಳ ಪ್ರಕಾರ ಮೇ 14ರಂದು ಈ ಜೋಡಿ ವಿವಾಹವಾಗುತ್ತಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ನಿಖಿಲ್​ ಮತ್ತು ಪಲ್ಲವಿ ವಿವಾಹ ಏ.16ರಂದು ನಡೆಯ ಬೇಕಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ವಿವಾಹ ದಿನಾಂಕ ಮುಂದೂಡಿಕೆ ಆಯಿತು. ಇದೀಗ ನಿಖಿಲ್​ ತಮ್ಮ ಫಾರ್ಮ್​ಹೌಸ್​ನಲ್ಲಿ ಸರಳ ವಿವಾಹವಾಗುತ್ತಿದ್ದಾರೆ. ಆದರೆ ಮದುವೆಗೆ ಕೆಲವೇ ಕೆಲವು ಮಂದಿ ಸ್ನೇಹಿತರು, ಸಂಬಂಧಿಕರಿಗೆ ಮಾತ್ರ ಆಹ್ವಾನವಂತೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ನಿಖಿಲ್​ ಮತ್ತು ಪಲ್ಲವಿ ಅವರ ನಿಶ್ಚಿತಾರ್ಥ ನೆರವೇರಿತ್ತು. ಇನ್ನು ನಿಖಿಲ್​​​ ‘ಕಾರ್ತಿಕೇಯ-2‘ ಮತ್ತು ‘18 ಪೇಜಸ್​‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!