Saturday, June 13, 2026
Homeತಾಜಾ ಸುದ್ದಿಕಾಸು ಹೊಡೆಯುವುದೇ ಅವ್ನ ಕೆಲಸ? ರಾಜೀನಾಮೆ ಕೇಳೋಕೆ ಅವನ್ಯಾರು?: ಹೆಚ್‌ಡಿಕೆ ವಿರುದ್ಧ ಗುಬ್ಬಿ ಶ್ರೀನಿವಾಸ್‌ ಕೆಂಡಾಮಂಡಲ

ಕಾಸು ಹೊಡೆಯುವುದೇ ಅವ್ನ ಕೆಲಸ? ರಾಜೀನಾಮೆ ಕೇಳೋಕೆ ಅವನ್ಯಾರು?: ಹೆಚ್‌ಡಿಕೆ ವಿರುದ್ಧ ಗುಬ್ಬಿ ಶ್ರೀನಿವಾಸ್‌ ಕೆಂಡಾಮಂಡಲ

- Advertisement -
- Advertisement -

ತುಮಕೂರು: ರಾಜ್ಯಸಭೆ ಚುನಾವಣೆ ಬಳಿಕ ಜೆಡಿಎಸ್​ನಲ್ಲಿ ಕೋಲಾಹಲ ಸೃಷ್ಟಿ ಆಗಿದೆ. ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಜೆಡಿಎಸ್​ ವರಿಷ್ಠ, ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ರು. ಇದೀಗ ಬಂಡಾಯ ಶಾಸಕರು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಜೆಡಿಎಸ್​ ನಲ್ಲಿ ಮೂರು ಮತ್ತೊಂದು ಜನ ಇದಾರೆ. ನನ್ನ ಮೇಲೆ ಮುತ್ತಿಗೆ ಏನ್ ಹಾಕ್ತಾರಾ? ಒಬ್ಬನು ನನ್ನ ಮತದಾರರಿಲ್ಲ, ಕುಮಾರಸ್ವಾಮಿ ಹತ್ರ ಕಾಸು ಇಸ್ಕೊಂಡು ಬಂದಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಮತ್ತೆ ಎಸ್.ಆರ್.ಶ್ರೀನಿವಾಸ್ ಹರಿಹಾಯ್ದಿದ್ದಾರೆ. ಏಕವಚನದಲ್ಲೇ ವಾಗ್ದಾಳಿ ನಡೆಸಿದ ಶ್ರೀನಿವಾಸ್​, ಕಾಸು ಹೊಡೆಯುವುದೇ ಅವ್ನ ಕೆಲಸ, ಸೀಟ್ ಕೊಡಿಸ್ತೀನಿ ಅಂತಾ ಕಾಸು ಹೊಡೀತಾನೆ ಎಂದ್ರು.

ಹಳ್ಳಿ ಕಡೆ ಜನ ಜೀವನಕ್ಕೆ 5 ಎಕರೆ ಇಟ್ಟುಕೊಂಡಂಗೆ ಅವ್ರು ಪಕ್ಷ ಇಟ್ಟುಕೊಂಡವರೇ, ಇವರು ಬದುಕೋದಕ್ಕಾಗಿ ಇಟ್ಟುಕೊಂಡಿರೋ ಪಕ್ಷ ಇದು. ಕಾಸು ಕೊಟ್ರೆ ಟಿಕೆಟ್, ಕಾಸು ಕೊಟ್ರೆ ಕಾರ್ಯಕರ್ತರು. ಕುಮಾರಸ್ವಾಮಿಗೆ ಮಾನ ಮಾರ್ಯದೆ ಇದ್ದಿದ್ರೆ ಇದೆಲ್ಲಾ ಹೇಳ್ತಾ ಇರಲಿಲ್ಲ.ಅವನಿಗೆ ತಾಕತ್ತಿದ್ರೆ ಗುಬ್ಬಿಲೀ ಬಂದು ನಿಲ್ಲಲಿ. ಚುನಾವಣೆಗೆ ಬಂದು ನಿಂತುಕೊಳ್ಳಲಿ ಅವನು. ಇದಕ್ಕೆಲ್ಲಾ ನಾನೇನು ಹೆದರೋನಲ್ಲ ಎಂದು ಏಕವಚನದಲ್ಲೇ ಕುಮಾರಸ್ವಾಮಿ ವಿರುದ್ಧ ಶ್ರೀನಿವಾಸ ಕಿಡಿಕಾರಿದ್ರು.


ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ರೀನಿವಾಸ್​ ಅವನ್ಯಾರು ರಾಜೀನಾಮೆ ಕೇಳೋಕೆ, ನನ್ನ ಕ್ಷೇತ್ರದ ಜನ ಕೇಳಬೇಕು. ನನ್ನ ಕ್ಷೇತ್ರದೋರು ಇಲ್ಲಿ ಯಾರು ಬಂದಿಲ್ಲ ರಾಜೀನಾಮೆ ಕೊಡ್ರಿ ಅಂತ ಕೇಳೋಕೆ. ಫೋನ್ ಮಾಡಿ ಹೇಳಿದ್ದಾನೆ ಅವರೆಲ್ಲಾ ನನಗೆ ಹೇಳಿದ್ದಾರೆ ಬರ್ತೀವಿ ಅಂತಾ.ಬರಪ್ಪಾ ಅಂತಾ ನಾನೇ ಕರೆದಿದ್ದೇನೆ. ಬಂದವರೇ ಹೋಗ್ತಾರೆ ಅಷ್ಟೇ ಅಂದಿದ್ದಾರೆ.

- Advertisement -

Latest News

error: Content is protected !!