Saturday, June 6, 2026
Homeತಾಜಾ ಸುದ್ದಿಒಂದೂವರೆ ವರ್ಷದಲ್ಲಿ ಕುಡಿಯುವುದಕ್ಕೂ ನೀರು ಸಿಗುವುದಿಲ್ಲ: ಕೋಡಿಹಳ್ಳಿ ಶ್ರೀಗಳ ಭವಿಷ್ಯ

ಒಂದೂವರೆ ವರ್ಷದಲ್ಲಿ ಕುಡಿಯುವುದಕ್ಕೂ ನೀರು ಸಿಗುವುದಿಲ್ಲ: ಕೋಡಿಹಳ್ಳಿ ಶ್ರೀಗಳ ಭವಿಷ್ಯ

- Advertisement -
- Advertisement -

ಬಳ್ಳಾರಿ: ಇನ್ನು ಒಂದೂವರೆ ವರ್ಷದಲ್ಲಿ ಮಹಾಮಾರಿ ಕೋವಿಡ್ -19 ಸಂಪೂರ್ಣವಾಗಿ ಮರೆಯಾಗುತ್ತದೆ. ಆದರೆ, ಹೋಗುವಾಗ ವಿಶೇಷವಾದ ಕಷ್ಟ ಒಂದನ್ನು ಕೊಟ್ಟು ಹೋಗುತ್ತದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.


ಬಳ್ಳಾರಿಯಲ್ಲಿ ಮಾತನಾಡಿದ ಶ್ರೀಗಳು, ಕೋವಿಡ್ ಮತ್ತೆ ಬರುತ್ತದೆ ಎಂದು ಮೂರು ತಿಂಗಳ ಹಿಂದೆಯೇ ಹೇಳಿದ್ದೆ. ಅದರಂತೆ ಕೊರೊನಾ ಪ್ರಕರಣಗಳು ನಿತ್ಯವು ಏರಿಕೆಯಾಗುತ್ತಿದೆ. ಆದರೆ, ಕೊವಿಡ್ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ಒಂದೂವರೆ ವರ್ಷದಲ್ಲಿ ಸಂಪೂರ್ಣವಾಗಿ ಜಗತ್ತಿನಾದ್ಯಂತ ಕೋವಿಡ್ ಕಣ್ಮರೆಯಾಗುತ್ತದೆ.


ಆದರೆ, ಕರೊನಾ ಹೋಗುವಾಗ ಜಗತ್ತಿನಾದ್ಯಂತ ಕುಡಿಯುವುದಕ್ಕೆ ನೀರಿಲ್ಲದಂತೆ ಆಗುತ್ತದೆ.ಅಷ್ಟೊಂದು ನೋವನ್ನು ಕೊಡುತ್ತದೆ ಎಂದು ಭವಿಷ್ಯ ನುಡಿದರು.ಮಳೆ ಬಗ್ಗೆ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳು, ಈ ಹಿಂದೆ ಕಂಡಮಂಡಲ ಆಗುತ್ತೆ ಎಂದಿದ್ದೆ. ಮಲೆನಾಡು ಬಯಲಾಗ ಬಯಲು ಮಲೆನಾಡಾಗತ್ತೆ ಎಂದಿದ್ದೆ. ಈಗ ಎಲ್ಲ ಕಡೆ ನೀರ ಕಂಡಮಂಡಲ ಆಗ್ತಾ ಇದೆ.ಮುಂಗಾರು ಮಳೆ ಇನ್ನೂ ಜಾಸ್ತಿಯಾಗೋ ಲಕ್ಷಣ ಇದೆ. ಈ ಬಾರಿ ಅಕಾಲಿಕ ಮಳೆ ಆಗುವ ಲಕ್ಷಣವೂ ಇದೆ. ದೊಡ್ಡದೊಡ್ಡ ನಗರಗಳಿಗೆ ತೊಂದರೆಯಾಗುತ್ತದೆ. ಎಂದರು.

- Advertisement -

Latest News

error: Content is protected !!