Wednesday, July 8, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಎಸ್.ಐ.ಆರ್ ಕರ್ತವ್ಯಕ್ಕೆ ಹೋದ ಮಹಿಳೆಗೆ ಜಾತಿ ನಿಂದನೆ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ...

ಬೆಳ್ತಂಗಡಿ : ಎಸ್.ಐ.ಆರ್ ಕರ್ತವ್ಯಕ್ಕೆ ಹೋದ ಮಹಿಳೆಗೆ ಜಾತಿ ನಿಂದನೆ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ಶಿರ್ಲಾಲಿನಲ್ಲಿ ಎಸ್.ಐ ಆರ್ ಕೆಲಸಕ್ಕೆಂದು ತೆರಳಿದ್ದ ದಲಿತ ಸಮುದಾಯಕ್ಕೆ ಸೇರಿದ‌ ಬಿ.ಎಲ್.ಒ ಗೆ ಸ್ಥಳೀಯ ನಿವಾಸಿ ಯಶೋಧ ಆಚಾರಿ ಎಂಬವರು ಮನೆಯೊಳಗೆ ಪ್ರವೇಶಿಸಲು ಅನುಮತಿ ನೀಡದೆ ನೀನು ಹೊರಗೆ ನಿಲ್ಲು ನಿನ್ನ ಜಾತಿಯವರು ಅಲ್ಲಿಯೇ ನಿಲ್ಲುವುದು ಬರಬಾರದು ಎಂದು ಜಾತಿ ನಿಂದನೆ ಮಾಡಿರುವುದಾಗಿ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಬಿಎಲ್.ಒ ಆಗಿ ಕೆಲಸ ಮಾಡುತ್ತಿದ್ದು ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬವರ ಮನೆಗೆ ಎ.ಎಲ್.ಒ‌ ಮಾಧವ ಎಂಬರೊಂದಿಗೆ ಜು.6 ರಂದು ಬೆಳಗ್ಗೆ 11:30 ಕ್ಕೆ ಮನೆಯ ಅಂಗಳಕ್ಕೆ ಪ್ರವೇಶಿಸಿದಾಗ “ನೀನು ಅಲ್ಲಿಯೇ ನಿಲ್ಲು ನಿಮ್ಮ ಜಾತಿಯವರು ಇಲ್ಲಿಗೆ ಬರುವುದಿಲ್ಲ” ಎಂದು ಹೇಳಿದ್ದು ಮನೆಯ ಸಿಟ್ ಔಟ್ ಗೆ ಪ್ರವೇಶ ನೀಡದೆ ಮೆಟ್ಟಿಲು ಬಳಿಯೇ ಮಾತಿನಲ್ಲಿಯೇ ತಡೆದು ಯಶೋಧ ಆಚಾರಿ ನಿಲ್ಲಿಸಿ ಅಪಮಾನ ಮಾಡಿ ಜಾತಿ ನಿಂದನೆ ಮಾಡಿರುವುದಾಗಿ ಜು.7 ರಂದು ದೂರು ನೀಡಿದ್ದಾರೆ.

ಬಿ.ಎಲ್.ಒ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಯಶೋಧ ಆಚಾರಿ ವಿರುದ್ಧ ಜು.7 ರಂದು ಸಂಜೆ SC/ST act-2015(u/s-3(1)(r),3(2)(va)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!