Monday, May 13, 2024
Homeಇತರವಿಶೇಷ ಲೇಖನ: ಮಾಸ್ಕ್ ಧರಿಸೋಣ, ಜವಾಬ್ದಾರಿಯುತ ನಾಗರಿಕರಾಗೋಣ..

ವಿಶೇಷ ಲೇಖನ: ಮಾಸ್ಕ್ ಧರಿಸೋಣ, ಜವಾಬ್ದಾರಿಯುತ ನಾಗರಿಕರಾಗೋಣ..

spot_img
- Advertisement -
- Advertisement -

ಪುತ್ತೂರು: ಮಾಸ್ಕ್ ಧರಿಸೋದು ಕೇವಲ ಲಾಕ್ಡೌನ್ ಗೆ ಕೊಟ್ಟಿರುವ ಟಾಸ್ಕ್ ಎಂದು ತಿಳಿಯದಿರಿ, ಇಡೀ ವಿಶ್ವಕ್ಕೆಯೆ ಮಾಸ್ಕ್ ಎಂಬ ಪರದೆಯನ್ನು ಕಟ್ಟಬೇಕಾದ ಅನಿರ್ವಾತೆ ಎದುರಾಗಿದೆ. ಕೊರೋನ ಎಂಬ ವೈರಸ್ ಜನರಿಂದ ಜನರಿಗೆ ಹರಡದಂತೆ ಲಾಕ್ಡೌನ್ ಮಾಡಿದರು. ಜನರೆಲ್ಲ ಮನೆಯಿಂದ ಹೊರಗಡೆ ಕಾಲಿಡುವುದಕ್ಕೆ ಆತಂಕ ಪಡುತ್ತಿದ್ದರು ಜನರ ಮುಂದೆ ನಿಂತು ವ್ಯವಹರಿಸುವುದಕ್ಕೂ ಬಾಯಿ ಮೂಗು ಮುಚ್ಚಿಕೊಳ್ಳುವಂತೆ ಮಾಸ್ಕ್ ಧರಿಸುತ್ತಿದ್ದರು, ಇನ್ನು ಕೆಲವರು ತಮ್ಮ ತಮ್ಮ ಮನೆಯಲ್ಲಿ ಸಹ ಮಾಸ್ಕ್ ಧರಿಸುವುದರ ಮೂಲ ಕೊರೋನ ವೈರಸ್ ಹರಡಂತೆ ಮುಂಜಾಗ್ರತೆ ವಹಿಸುತ್ತಿದ್ದರು.

ಜನರು ಎಷ್ಟೇ ಜಾಗ್ರತೆ ವಹಿಸಿದರು ಕೊರೋನ ಎಂಬ ಮಹಾಮಾರಿಯ ಆರ್ಭಟ ಕಡಿಮೆಯಾಗುತ್ತಿಲ್ಲ, ಚೀನಾದ ಊಹಾನ್ ಎಂಬ ಪ್ರದೇಶದಲ್ಲಿ ಜನ್ಮತಾಳಿದ ಈ ವೈರಸ್ ಇಡೀ ವಿಶ್ವವನ್ನೆ ವ್ಯಾಪಿಸಿದೆ ಜನರ ನೆಮ್ಮದಿಯನ್ನು ಹಾಳು ಮಾಡಿದ ಈ ವೈರಸ್ ನ್ನು ತಡಗಟ್ಟಲೆಂದೆ ಲಾಕ್ಡೌನ್ ಹೇರಲಾಗಿತ್ತು, ಇಷ್ಟು ಮಾತ್ರವಲ್ಲದೆ ಮನೆಯಿಂದ ಹೊರಗಡೆ ಕಾಲಿಡಬೇಕಾದರೆ ಮಾಸ್ಕ್ ಕಡ್ಡಾಯ ಎಂಬುದು ಎಲ್ಲರಿಗೂ ತಿಳಿದಿದೆ.

ಕೆಲವು ತಿಂಗಳುಗಳಿಂದ ವಾಹನಗಳಿಲ್ಲದೆ ನಿಶಬ್ದವಾಗಿದ್ದ ರಸ್ತೆಗಳು ಇದೀಗ ವಾಹನಗಳು ಸರಾಗವಾಗಿ ಸಂಚರಿಸಲು ಆರಂಭಿಸಿವೆ, ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಪೇಟೆಗಳು ಇದೀಗ ಜನ ಜಾತ್ರೆಯಂತೆ ಕಾಣಲು ಆರಂಭಿಸಿವೆ, ಇದಕ್ಕೆ ಕಾರಣ ಲಾಕ್ಡೌನ್ ಸಡಿಲಿಕೆ. ತಿಂಗಳುಗಳಿಂದ ಯಾವುದೇ ವ್ಯಾಪಾರ ವಹಿವಾಟು ಇಲ್ಲದೆ, ವಾಹನ ಸಂಚಾರವಿಲ್ಲದೆ ಜನ ತತ್ತರಿಸಿ ಹೋಗಿದ್ದರು ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿತು.

ಜನರ ರಕ್ಷಣೆ ಮಾಡುವುದೆ ನಮ್ಮ ಮೊದಲ ಕೆಲಸ ಎಂಬುದನ್ನು ನಮ್ಮ ದೇಶದ ಪ್ರಧಾನಿಯವರು ಅನೇಕ ಸಲ ಹೇಳಿದ್ದಾರೆ ಮಾತ್ರವಲ್ಲದೆ ಮಾಸ್ಕ್ ಧರಿಸಿ ಕೊರೋನ ವೈರಸ್ ಹರಡಂತೆ ನಮ್ಮ ಜಾಗ್ರತೆ ನಾವೇ ಮಾಡಬೇಕಾಗಿದೆ ಎಂಬುದನ್ನು ಸಾರಿ ಸಾರಿ ಹೇಳಿದ್ದಾರೆ‌ ಇದೀಗ ಕೊರೋನ ಮಾರಿಯ ಓಡಾಟ ಕಡಿಮೆಯಾಗಿಲ್ಲ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಆದರು ಲಾಕ್ಡೌನ್ ಹಂತ ಹಂತವಾಗಿ ಸಡಿಲಿಕೆಯಾಗುತ್ತಿದೆ. ಜನಗಳ ಓಡಾಟ ಪ್ರಾರಂಭವಾಗಿದೆ ಆದರೆ ಮಾಸ್ಕ್ ಧರಿಸಬೇಕೆನ್ನುವುದನ್ನೆ ಕೆಲವು ಜನಗಳು ಮರೆತಂತ್ತಿದೆ.

ಪೋಲಿಸರನ್ನು ನೋಡಿದ ತಕ್ಷಣ ಕೆಲವರು ಮಾಸ್ಕ್ ಧರಿಸುವುದು ನಂತರ ಮಾಸ್ಕ್ ಧರಿಸದೆ ಊರೆಲ್ಲ ಓಡಾಡುವ ಜನಗಳು ಮಾಸ್ಕ್ ಧರಿಸುವುದು ಕೇವಲ ಲಾಕ್ಡೌನ್ ಗೆ ಮಾತ್ರ ಅಂದುಕೊಂಡರೆ? ವೈರಸ್ ಹರಡದಂತೆ ನಾವು ಲಾಕ್ಡೌನ್ ಇದ್ದಾಗ ಹೇಗೆ ಸಹಕರಿಸಿದ್ದೇವೊ ಅದೇ ರೀತಿ ಈಗ ಮನೆಯಿಂದ ಹೊರನಡೆಯಬೇಕಾದರೆ ಮಾಸ್ಕ್ ಧರಿಸಲೇ ಬೇಕು‌. ಕೊರೋನ ಸೋಂಕು ಹರಡುವುದನ್ನು ತಪ್ಪಿಸಲು ನಾವು ನಮ್ಮ ಬಾಯಿ ಮೂಗುಗಳನ್ನು ಮಾಸ್ಕ್ ಅಥವಾ ಸಣ್ಣ ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ನಾವು ಮನೆಯಿಂದ ಹೊರಗಡೆ ಪ್ರಯಾಣಿಸುತ್ತೇವೆ ಮತ್ತೆ ತಮ್ಮ ತಮ್ಮ ಮನೆಯನ್ನು ಸೇರುತ್ತೇವೆ ಈ ಸಂದರ್ಭದಲ್ಲಿ ನಾವು ಮಾತ್ರವಲ್ಲ ನಮ್ಮ ಮನೆಯವರನ್ನು ಸಂಕಷ್ಟಕ್ಕೆ ಸಿಲುಕಿಸದಂತೆ ಎಚ್ಚರವಹಿಸಬೇಕು.

ನಾವು ಮಾಸ್ಕ್ ಧರಿಸದೆ ಹೊರಗಿನ ಜನಗಳ ಜೊತೆ ಸೇರುವುದು ಮತ್ತೆ ನಾವು ಮನೆಮಂದಿ ಜೊತೆ ಸೇರುವುದು ಇದೆಲ್ಲವೂ ಮುಂದೆ ದೊಡ್ಡ ತಲೆನೋವನ್ನೆ ತಂದೊಡ್ಡಬಹುದು ಹಾಗಾಗಿ ನಾವು ಈ ಸಮಯದಲ್ಲಿ ಹೇಗೆ ವರ್ತಿಸಬೇಕು ಅದನ್ನು ತಪ್ಪದೆ ಪಾಲಿಸಬೇಕು, ಇದೀಗ ಲಾಕ್ಡೌನ್ ಸಡಿಲಿಕೆಯಾಗಿದೆ ಅಷ್ಟೆ ವಿನಃ ಕೊರೋನ ಎಂಬ ಮಹಾಮಾರಿ ಇನ್ನು ನಾಶವಾಗಿಲ್ಲ, ಮಾಸ್ಕ್ ಧರಿಸುವುದು ನಮಗಾಗಿ ನಮ್ಮ ಆರೋಗ್ಯಕ್ಕಾಗಿ, ದಿನೇ ದಿನೇ ಮಾಸ್ಕ್ ಧರಿಸಿ ಎಂಬುದನ್ನು ಪದೇ ಪದೇ ಪೋಲಿಸರಾಗಲಿ, ಆರೋಗ್ಯ ಇಲಾಖೆಯವರು ಸಂದಂಭಪಟ್ಟ ಅಧಿಕಾರಿಗಳು ಹೇಳುತ್ತಲೆ ಇದ್ದಾರೆ. ಜೇಬಲ್ಲಿ ಹಣವಿಲ್ಲದೆ ನಾವು ಓಡಾಡುವುದಿಲ್ಲ ಹಾಗೆಯೆ ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಕಾಲಿಡಬೇಡಿ‌.

ಲೇಖನ: ಹರೀಶ್ ಪುತ್ತೂರು
ವಿದ್ಯಾ ಆರ್ಟ್ಸ್ ಕ್ರಿಯೇಷನ್

- Advertisement -
spot_img

Latest News

error: Content is protected !!