Sunday, April 28, 2024
Homeತಾಜಾ ಸುದ್ದಿಹೈದರಾಬಾದ್ ನ ತನ್ನ ಮನೆಯಲ್ಲಿ ಕಳ್ಳತನ ​​: ಅಮೇರಿಕಾದಲ್ಲಿದ್ದುಕೊಂಡೇ ಕಳ್ಳನನ್ನು ಹಿಡಿದ ಮನೆ ಮಾಲೀಕ

ಹೈದರಾಬಾದ್ ನ ತನ್ನ ಮನೆಯಲ್ಲಿ ಕಳ್ಳತನ ​​: ಅಮೇರಿಕಾದಲ್ಲಿದ್ದುಕೊಂಡೇ ಕಳ್ಳನನ್ನು ಹಿಡಿದ ಮನೆ ಮಾಲೀಕ

spot_img
- Advertisement -
- Advertisement -

ಹೈದರಾಬಾದ್​​: ತಂತ್ರಜ್ಞಾನದಿಂದ ಏನೆಲ್ಲಾ ಮಾಡಬಹುದು ಅನ್ನೋದನ್ನು ಊಹಿಸೋದು ಕೂಡ ಅಸಾಧ್ಯ. ಯಾವುದೋ ಮೂಲೆಯಲ್ಲಿ ಕೂತುಕೊಂಡು ಏನು ಬೇಕಾದರೂ ಮಾಡಬಹುಹು. ಅಂತಹದ್ದೇ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ.

 ಹೈದರಾಬಾದ್ ನ ಸೈಬರಾಬಾದ್​ ಪೊಲೀಸ್​ ಆಯುಕ್ತರ ಕಚೇರಿ ವ್ಯಾಪ್ತಿಯ ಕುಕಟಪಲ್ಲಿ ಹೌಸಿಂಗ್​ ಬೋರ್ಡ್​ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಅಮೇರಿಕಾದಲ್ಲಿ ವಾಸವಿದ್ದ ವ್ಯಾಪ್ತಿಯ ಕುಕಟಪಲ್ಲಿ ಹೌಸಿಂಗ್​ ಬೋರ್ಡ್​ ಕಾಲೋನಿಯ ನಿವಾಸಿಯೊಬ್ಬ ತನ್ನ ಮನೆಗೆ  ಮಾನಿಟರ್​ ಸೆನ್ಸಾರ್​ ಸಾಧನ ಒಳಗೊಂಡ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದ.  

ಅದರಂತೆ ಯಾರಾದರೂ ಮನೆಯ ಆಸುಪಾಸಿನಲ್ಲಿ ಬಂದರೆ ಮಾಲೀಕನ ಮೊಬೈಲ್​ಗೆ ಎಚ್ಚರಿಕೆ ಕರೆ ಹೋಗುತ್ತಿತ್ತು. ಅದೇ ರೀತಿಯ ಮಾರ್ಚ್​ 9ರಂದು ಬೆಳಗ್ಗೆ ಮೂರು ಗಂಟೆಗೆ ಎಚ್ಚರಿಕೆ ಕರೆ ಬಂದಾಗ ಮೊಬೈಲ್​ ತೆಗೆದು ನೋಡಿದ ಮಾಲೀಕನಿಗೆ ಶಾಕ್​ ಕಾದಿತ್ತು. ಖದೀಮನೊಬ್ಬ ಮನೆಯ ಸುತ್ತಮುತ್ತ ಓಡಾಡುವುದನ್ನು ನೋಡಿದ ಮಾಲೀಕ ತಕ್ಷಣ ನೆರೆಮನೆಯವರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಮನೆಯತ್ತ ಓಡಿಬಂದ ನೆರೆಯವರು ಮನೆಯ ಬಾಗಿಲು ತೆರೆದಿರುವುದನ್ನು ನೋಡಿ ಹೊರಗಿನಿಂದ ಲಾಕ್​ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!