Tuesday, June 23, 2026
Homeತಾಜಾ ಸುದ್ದಿಶಿವಕುಮಾರ್ ಅವರನ್ನು ಸಿಎಂ ಆಗಲು ಹೈಕಮಾಂಡ್ ಬಿಡಲ್ಲ; ಬಹಿರಂಗವಾಗಿಯೇ ಕನಕಪುರದ ಬಂಡೆಯ ವಿರುದ್ಧ ಕೋಪ ಹೊರ...

ಶಿವಕುಮಾರ್ ಅವರನ್ನು ಸಿಎಂ ಆಗಲು ಹೈಕಮಾಂಡ್ ಬಿಡಲ್ಲ; ಬಹಿರಂಗವಾಗಿಯೇ ಕನಕಪುರದ ಬಂಡೆಯ ವಿರುದ್ಧ ಕೋಪ ಹೊರ ಹಾಕಿದ ಟಗರು

- Advertisement -
- Advertisement -

ಬೆಂಗಳೂರು : ಶಿವಕುಮಾರ್ ಅವರನ್ನು ಸಿಎಂ ಆಗಲು ಹೈಕಮಾಂಡ್ ಬಿಡಲ್ಲ ಎಂದು ಸಂದರ್ಶನವೊಂದರಲ್ಲಿ ಮಾಜಿ ಸಿಎಂ ವಿಪಕ್ಷ ನಾಯಕ ಹೇಳುವ ಮೂಲಕ ಡಿ ಕೆ ಶಿವರುಮಾರ್ ಹಾಗೂ ತಮ್ಮ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದನ್ನು ಜಗಜ್ಜಾಹೀರು ಮಾಡಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಹೈಕಮಾಂಡ್ ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾನು ಡಿ.ಕೆ. ಶಿವಕುಮಾರ್ ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು.ಇದು ನನ್ನ ಸಾರ್ವಜನಿಕ ಜೀವನದ ಕೊನೇ ಚುನಾವಣೆ. ಹೀಗಾಗಿ ಡಿ.ಕೆ. ಶಿವಕುಮಾರ್ ಗೆ ಮುಖ್ಯಮಂತ್ರಿಯಾಗಲು ಹೈಕಮಾಂಡ್ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಸದ್ಯ ಚುನಾವಣೆಯ ಹೊಸ್ತಿಲಲ್ಲಿ ಸಿದ್ದರಾಮಯ್ಯನವರ ಈ ಹೇಳಿಕೆ ಉರಿಯುತ್ತಿರುವ ಕೆಂಡಕ್ಕೆ ತುಪ್ಪ ಸುರಿದಂತಾಗಿದೆ.

- Advertisement -

Latest News

error: Content is protected !!