Tuesday, May 21, 2024
Homeಕರಾವಳಿಬಂಟ್ವಾಳ; ಬಲ್ಗೇರಿಯಾದಲ್ಲಿ ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಮಹಿಳೆಗೆ 6.30 ಲಕ್ಷ ರೂ. ವಂಚನೆ

ಬಂಟ್ವಾಳ; ಬಲ್ಗೇರಿಯಾದಲ್ಲಿ ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಮಹಿಳೆಗೆ 6.30 ಲಕ್ಷ ರೂ. ವಂಚನೆ

spot_img
- Advertisement -
- Advertisement -

ಬಂಟ್ವಾಳ:  ಬಲ್ಗೇರಿಯಾದಲ್ಲಿ ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಮಹಿಳೆಗೆ 6.30 ಲಕ್ಷ ರೂ. ವಂಚಸಿರುವ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ತೊಡಂಬಿಲದಲ್ಲಿ ನಡೆದಿದೆ. ತೊಡಂಬಿಲ ನಿವಾಸಿ ನೆಲ್ಲಿ ಲೀನಾ ಮೊಂತೊರೊಗೆ ವಂಚನೆಗೆ ಒಳಗಾದವರು.

ಲೀನಾ ಮೊಂತೊರೊಗೆ ಸಂಬಂಧಿ ಲವೀನಾ ಲೋಬೊ ಅವರ ಮೂಲಕ ಆರೋಪಿ ಸುಧೀರ್‌ರಾವ್‌ ನ ಪರಿಚಯವಾಗಿದೆ. ಬಳಿಕ ಮಕ್ಕಳಿಗೆ ಉದ್ಯೋಗ ಕೊಡಿಸುದಾಗಿ ಹೇಳಿದ ಆತ ಬ್ಯಾಂಕ್‌ ಖಾತೆಗೆ ಹಲವು ಬಾರಿ ದುಡ್ಡು ಹಾಕಿಸಿಕೊಂಡಿದ್ದಾನೆ.

ಫೆ. 22ರಂದು ಬಿ.ಸಿ.ರೋಡಿನಲ್ಲಿ 2,83,800 ರೂ., 28ರಂದು ಆನ್‌ಲೈನ್‌ ಮೂಲಕ 50 ರೂ. ಹಾಗೂ 84,950 ರೂ, ಜತೆಗೆ ಬೇರೆ ಬೇರೆ ದಿನಗಳಲ್ಲಿ 71 ಸಾವಿರ ರೂ., 60 ಸಾವಿರ ರೂ., 16 ಸಾವಿರ ರೂ., 2,500 ರೂ., 2,100 ರೂ., 49 ಸಾವಿರ ರೂ, 45 ಸಾವಿರ ರೂ.ಗಳನ್ನು ಹೀಗೆ ಬ್ಯಾಂಕೊಂದರ ಬೆಂಗಳೂರು ಶಾಖೆಯ ಉಳಿತಾಯ ಖಾತೆಗೆ ಹಾಕಿಸಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಇದಾದ ಬಳಿಕ ಮಾ. 19ರಂದು ಮಕ್ಕಳನ್ನು ಮುಂಬಯಿಗೆ ಬರ ಹೇಳಿ ಅಲ್ಲಿ ಅವರಿಂದ 15,600 ರೂ. ಪಡೆದು ಬಲ್ಗೇರಿಯಾದಲ್ಲಿ ಚಳಿ ಇದ್ದು ಜಾಕೆಟ್‌ ತರುವುದಾಗಿ ಹೇಳಿ ಹೋದವನು ಪರಾರಿ ಯಾಗಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.ಆತನ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದರೆ ಸ್ವಿಟ್ಚ್ಡ್ ಆಫ್‌ ಬರುತ್ತಿದೆ ಎನ್ನಲಾಗಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

- Advertisement -
spot_img

Latest News

error: Content is protected !!