Saturday, May 11, 2024
Homeಮನರಂಜನೆಈ ಬಾರಿ ನನ್ನ ಮಗಳ ಬರ್ತಡೇಯನ್ನು ಹೀಗೆ ಆಚರಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಶ್ವೇತಾ...

ಈ ಬಾರಿ ನನ್ನ ಮಗಳ ಬರ್ತಡೇಯನ್ನು ಹೀಗೆ ಆಚರಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಶ್ವೇತಾ ಶ್ರೀವಾತ್ಸವ್..

spot_img
- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಅವರಂತೆ ಅವರ ಮಗಳು ಕೂಡ ಪುಟಾಣಿ ಸೆಲೆಬ್ರೆಟಿ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಫೇಸ್ ಬುಕ್ ಹಾಗೇ ಇನ್ಸ್ಟಾಗ್ರಾಮ್ ನಲ್ಲಿ ಅವರ ಮಗಳು ಅಶ್ಮಿತಾ ಶ್ರೀವಾತ್ಸವ್ ಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಗಳಿದ್ದಾರೆ. ಸಾಕಷ್ಟು ಫಾಲೋವರ್ಸ್ ಗಳಿದ್ದಾರೆ. ಪ್ರತಿದಿನ ಶ್ವೇತಾ ಅವರು ಹಾಕುವ ಮಗಳ ಫೋಟೋ ಹಾಗೂ ವಿಡಿಯೋಗಳನ್ನು ನೋಡೋದಕ್ಕೆ ಅಂತಾನೇ ಕಾಯ್ತಿರೋ ಸಾಕಷ್ಟು ಜನರಿದ್ದಾರೆ. ಇಂತಹ ಅಭಿಮಾನಿಗಳಲ್ಲಿ ಶ್ವೇತಾ ಇದೀಗ ಒಂದು ಮನವಿ ಮಾಡಿಕೊಂಡಿದ್ದಾರೆ.

My little one is turning 3 next week (21st July 2020) and I would like to take this opportunity to share a small message…

Posted by Shwetha Srivatsav on Sunday, 19 July 2020

ಇದೇ ಜುಲೈ 21 ರಂದು ಶ್ವೇತಾ ಅವರ ಮಗಳು ಅಶ್ಮಿತಾ ತನ್ನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾಳೆ. ಈ ಹಿಂದಿನ ಆಕೆಯ ಎರಜು ಹುಟ್ಟುಹಬ್ಬಗಳಲ್ಲಿ ಆಕೆಯ ಕೆಲವು ಅಭಿಮಾನಿಗಳು ಭಾಗಿಯಾಗಿದ್ದರು. ಇನ್ನು ಕೆಲವರು ಆಕೆಗೆ ಗಿಫ್ಟ್ , ಚಾಕಲೇಟ್ಸ್ ಮುಂತಾದವುಗಳನ್ನು ಕಳುಹಿಸಿಕೊಟ್ಟು ಆಕೆಗೆ ಶುಭ ಕೋರಿದರು. ಆದ್ರೆ ಈ ಬಾರಿ ಆಕೆಯ ಬರ್ತಡೇಯನ್ನು ಬೇರೆ ರೀತಿ ಆಚರಿಸೋದಕ್ಕೆ ಶ್ವೇತಾ ನಿರ್ಧರಿಸಿದ್ದಾರೆ. ಈ ಬಾರಿ ನನ್ನ ಮಗಳ ಬರ್ತಡೇಗಾಗಿ ನೀವು ಮನೆ ಬಳಿ ಬರಬೇಡಿ, ಗಿಫ್ಟ್ ಗಳನ್ನು ಕಳುಹಿಸಬೇಡಿ. ಬದಲಾಗಿ ಆ ಹಣವನ್ನು ಅನಾಥಾಶ್ರಮದ ಮಕ್ಕಳಿಗೋ, ಇಲ್ಲಾ ಇನ್ನ್ಯಾರಿಗೆ ಅಗತ್ಯವಿದೆಯೋ ಅವರಿಗೆ ನೀಡಿ. ಅದೇ ನಮಗೆ ಖುಷಿ. ಅದು ನೀವು ನಮ್ಮ ಮಗಳಿಗೆ ತೋರಿಸೋ ಪ್ರೀತಿ, ಆಶೀರ್ವಾದ ಎಂದು ಶ್ವೇತಾ ಮನವಿ ಮಾಡಿಕೊಂಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಸುಮ್ಮನೆ ಹಣ ವ್ಯರ್ಥ ಮಾಡೋದು ಬೇಡ ಎಂದು ಶ್ವೇತಾ ಫೇಸ್ ಬುಕ್ ಮುಖಾಂತರ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!