Saturday, May 18, 2024
Homeಮನರಂಜನೆವಯಸ್ಸಿನಲ್ಲಿ ತನಗಿಂತ ಚಿಕ್ಕವರನ್ನು ಮದುವೆಯಾದ ನಟಿಯರು ಇವರೇ ನೋಡಿ!

ವಯಸ್ಸಿನಲ್ಲಿ ತನಗಿಂತ ಚಿಕ್ಕವರನ್ನು ಮದುವೆಯಾದ ನಟಿಯರು ಇವರೇ ನೋಡಿ!

spot_img
- Advertisement -
- Advertisement -

ಹಿಂದಿನ ಕಾಲದಲ್ಲಿ ಹುಡುಗನಿಗಿಂತ ಹುಡುಗಿ ದೊಡ್ಡವಳಾಗಿದ್ದರೆ ಖಂಡಿತ ಮದುವೆ ಆಗುತ್ತಿರಲಿಲ್ಲಆದರೆ ಈಗ ಕಾಲ ಬದಲಾಗಿದೆ ಆದರೂ ಹಳ್ಳಿ ಕಡೆ ಇದನ್ನು ಪಾಲಿಸುತ್ತಾ ಬರುತ್ತಿದ್ದಾರೆ ,ನಗರ ಪ್ರದೇಶಗಳಲ್ಲಿ ಹಾಗೂ ಸ್ಟಾರ್ಸ್ ವಿಷಯದಲ್ಲಿ ಈಗ ವಯಸ್ಸಿನ ಅಂತರ ದೊಡ್ಡ ವಿಷಯವೇ ಅಲ್ಲ ಹಾಗಾದ್ರೆ ಯಾವ ನಟಿಯರು ತನಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾಗಿದ್ದರೆ ಎಂಬುದನ್ನು ಹೇಳ್ತೀವಿ ಮುಂದೆ ಓದಿ…

1 ) ರಾಧಿಕಾ ಪಂಡಿತ್

ಕನ್ನಡದ ಸ್ಟಾರ್ ಕಪಲ್ ಅಂದ್ರೆ ಅದು ಯಶ್ ಮತ್ತು ರಾಧಿಕಾ ಪಂಡಿತ್. ಪ್ರೀತಿಸಿ ಮದುವೆಯಾದ ಇವರು ಸಂತೋಷದ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ರಾಧಿಕಾ ಪಂಡಿತ್ ಅವರು ಯಶ್ ಗಿಂತ 2 ವರ್ಷ ದೊಡ್ಡವರು.

2 ) ಛಾಯಾ ಸಿಂಗ್

ಕನ್ನಡದ ನಟಿ ಛಾಯಾ ಸಿಂಗ್ ಅವರು ತಮಿಳಿನ ಸ್ಟಾರ್ ನಟರಾದ ಕೃಷ್ಣ ಅವರನ್ನು ಮದುವೆಯಾಗಿದ್ದಾರೆ. ಕೃಷ್ಣ ಅವರು ಛಾಯಾ ಗಿಂತ 2 ವರ್ಷ ಚಿಕ್ಕವರು ಅನ್ನೋದು ವಿಶೇಷ.

3 ) ಸ್ನೇಹ

ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿ , ಕುರುಕ್ಷೇತ್ರ ಚಿತ್ರದಲ್ಲಿ ದ್ರೌಪದಿ ಪಾತ್ರ ಮಾಡಿ ಸೈ ಎನಿಸಿಕೊಂಡಿರುವ ಈ ನಟಿ ಪ್ರಸನ್ನ ಅವರನ್ನು ಮದುವೆಯಾಗಿದ್ದಾರೆ. ನಟ ಪ್ರಸನ್ನ ಅವರು ಸ್ನೇಹಕ್ಕಿಂತ 1 ವರ್ಷ ಚಿಕ್ಕವರು.

4 ) ಶಿಲ್ಪಾ ಶೆಟ್ಟಿ

ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಅವರು ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾಗಿದ್ದಾರೆ. ಶಿಲ್ಪಾಶೆಟ್ಟಿ ಗಿಂತ ರಾಜ್ ಕುಂದ್ರಾ 2 ವರ್ಷ ಚಿಕ್ಕವರು.

5 ) ಐಶ್ವರ್ಯ ರೈ

ತುಳುನಾಡಿನ ಬೆಡಗಿ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಅವರನ್ನು 2007 ರಲ್ಲಿ ಮದುವೆಯಾದರು. ಅಭಿಷೇಕ್ ಅವರು ಐಶ್ವರ್ಯ ಗಿಂತ 2 ವರ್ಷ ಚಿಕ್ಕವರು.

6 ) ಅನುಪ್ರಭಾಕರ್

ತನ್ನ ಮೊದಲನೇ ಮದುವೆಯಿಂದ ವಿಚ್ಛೇದನ ಪಡೆದ ಅನು ಪ್ರಭಾಕರ್. ತನಗಿಂತ 1 ವರ್ಷ ಚಿಕ್ಕವರಾದ ರಘು ಮುಖರ್ಜಿಯನ್ನು ಎರಡನೇ ಮದುವೆಯಾಗಿದ್ದಾರೆ.

7 ) ನಮ್ರತಾ ಶಿರೋಡ್ಕರ್

ಕನ್ನಡದ ಚೋರಾ ಚಿತ್ತ ಚೋರಾ ಚಿತ್ರದಲ್ಲಿ ನಟಿಸಿದ್ದ ನಟಿ ನಮ್ರತ ,ತೆಲುಗು ಸ್ಟಾರ್ ಮಹೇಶ್ ಬಾಬು ಅವರನ್ನು ಪ್ರೀತಿಸಿ ಮದುವೆಯಾದರು. ಮಹೇಶ್ ಬಾಬು ಅವರು ನಮ್ರತಾಗಿಂತ 2 ವರ್ಷ ಚಿಕ್ಕವರು.

ವಿಶೇಷ ಏನೆಂದರೆ ತನಗಿಂತ ಚಿಕ್ಕವರನ್ನು ಮದುವೆಯಾದ ಈ ಮೇಲಿನ ಎಲ್ಲಾ ನಟಿಯರು ಅನ್ಯೋನ್ಯವಾದ ಜೀವನ ನಡೆಸುತ್ತಿದ್ದಾರೆ.ಸಾಮಾನ್ಯವಾಗಿ ಪ್ರೀತಿಸಿ ಮದುವೆಯಾದರೆ ವಯಸ್ಸಿನ ಅಂತರವನ್ನು ಯಾರೂ ನೋಡುವುದಿಲ್ಲ .ಅರೇಂಜ್ಡ್ ಮ್ಯಾರೇಜ್ ಆದ್ರೆ ವಯಸ್ಸಿನ ಬಗ್ಗೆ ಹೆಚ್ಚು ಫೋಕಸ್ ಮಾಡಲಾಗುತ್ತದೆ.

- Advertisement -
spot_img

Latest News

error: Content is protected !!