Wednesday, June 24, 2026
Homeಮನರಂಜನೆ“ಆತನನ್ನು ನಂಬಿ ಮೋಸ ಹೋದೆ” ಮತ್ತೊಂದು ಸಂಕಷ್ಟದ ಬಗ್ಗೆ ಬಾಯ್ಬಿಟ್ಟ ಸಂಜನಾ

“ಆತನನ್ನು ನಂಬಿ ಮೋಸ ಹೋದೆ” ಮತ್ತೊಂದು ಸಂಕಷ್ಟದ ಬಗ್ಗೆ ಬಾಯ್ಬಿಟ್ಟ ಸಂಜನಾ

- Advertisement -
- Advertisement -

ಬೆಂಗಳೂರು: ಡ್ರಗ್ಸ್​ ಕೇಸ್​ನಲ್ಲಿ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿರುವ ಸಂಜನಾ ಇದೀಗ ತಾನು ಎದುರಿಸಿದ ಮತ್ತೊಂದು ಸಂಕಷ್ಟದ ಬಗ್ಗೆ ಬಾಯಿ ಬಿಟ್ಟಿದ್ದಾಳೆ.

ಹೌದು, ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಲಕ್ಷಾಂತರ ಜನರಿಂದ ಬಂಡವಾಳ ಹೂಡಿಕೆ ಮಾಡಿಸಿಕೊಂಡು ಎಲ್ಲರಿಗೂ ಪಂಗನಾಮ ಹಾಕಿದ ಐಎಂಎ ಕಂಪನಿ ಮಾಲೀಕ ಮಹಮದ್ ಮನ್ಸೂರ್ ಖಾನ್ ನಂಬಿ ಸಂಜನಾ ಕೂಡ ಮೋಸ ಹೋಗಿದ್ದಾಳೆ. ಈ ವಿಚಾರವನ್ನು ವಿಚಾರಣೆ ವೇಳೆ ಅವಳು ಹೇಳಿಕೊಂಡಿದ್ದಾಳೆ.

ಡ್ರಗ್ಸ್​ ಕೇಸ್​ ಸಂಬಂಧ ಸಂಜನಾರ ಆರ್ಥಿಕ ವ್ಯವಹಾರ ಕುರಿತು ಪೊಲೀಸರು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ನಟಿ, ‘ನಾನು ಮನ್ಸೂರ್ ಖಾನ್ ನಂಬಿ ಲಕ್ಷಾಂತರ ರೂಪಾಯಿಯನ್ನು ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿದ್ದೆ. ‌ನನ್ನ‌ ಕೆಲವು ಸ್ನೇಹಿತರು ಕೂಡ ಹೂಡಿಕೆ ಮಾಡಿದ್ದರು. ನಾವೆಲ್ಲರೂ ಮೋಸ ಹೋದೆವು. ಬಳಿಕ ಆರ್ಥಿಕ ಸಂಕಷ್ಟ ಎದುರಿಸಿದೆ. ನನ್ನ ಹಣ ಐಎಂಎ ಪಾಲಾಗಿದೆ’ ಎಂದು ಹೇಳಿದ್ದಾಳೆ.

- Advertisement -

Latest News

error: Content is protected !!