ನವದೆಹಲಿ : ಕೊರೊನಾ ಅನ್ನೋ ಹೆಮ್ಮಾರಿಯಿಂದಾಗಿ ನಮ್ಮ ನಿಮ್ಮ ಜೀವನವನ್ನು ಎಷ್ಟು ಬದಲಾಯಿಸಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಕಾಲಕ್ಕೆ ತಕ್ಕ ಕೋಲ ಅನ್ನೋ ರೀತಿ ಮನುಷ್ಯ ಕೂಡ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳುತ್ತಿದ್ದಾನೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅನ್ನೋ ರೀತಿ ಇದೆ ಈ ಘಟನೆ.
ಇತ್ತೀಚೆಗೆ ಕೊರೊನಾದಿಂದಾಗಿ ದಾಮ್ ಧೂಮ್ ಆಗಿ ನಡೆಯುತ್ತಿದ್ದ ಮದುವೆಗಳು ಸರಳವಾಗಿ ನಡೆಯೋದಕ್ಕೆ ಆರಂಭವಾಗಿದೆ. ದೆಹಲಿಯಲ್ಲಿ ಇದೇ ರೀತಿ ಮದುವೆಯಲ್ಲಿ ಮಹಿಳೆಯೊಬ್ಬರು ಮಾಡಿದ ಸೂಪರ್ ಡೂಪರ್ ಐಡಿಯಾ ಇದೀಗ ಭಾರೀ ವೈರಲ್ ಆಗಿದೆ.
ಯೆಸ್.. ಮಹಿಳೆಯೊಬ್ಬರು ಅರಶಿಣ ಶಾಸ್ತ್ರದಲ್ಲಿ ವಧುವಿಗೆ ಪೇಂಟ್ ರೋಲರ್ ಮೂಲಕ ಅರಿಶಿಣ ಶಾಸ್ತ್ರ ನೆರವೇರಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಹರ್ಜಿಂದರ್ ಸಿಂಗ್ ಕುಕ್ರೇಜಾ ಎಂಬವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಹಿಳೆ ಮಾಡಿದ ಉಪಾಯ ನೋಡಿದ ಜನರೆಲ್ಲಾ ಇದೀಗ ತಲೆ ಅಂದ್ರೆ ಇದಪ್ಪಾ ಅಂತಾ ಮಾತನಾಡಿಕೊಳ್ಳುತ್ತಿದ್ದಾರೆ.


