Monday, June 15, 2026
Homeತಾಜಾ ಸುದ್ದಿಅಂತ್ಯಸಂಸ್ಕಾರಕ್ಕೆ ಹೋದವರ ಮೇಲೆ ಛಾವಣಿ ಕುಸಿತ- ಸಾವನ್ನಪ್ಪಿದವರ ಸಂಖ್ಯೆ 23ಕ್ಕೆ ಏರಿಕೆ!..

ಅಂತ್ಯಸಂಸ್ಕಾರಕ್ಕೆ ಹೋದವರ ಮೇಲೆ ಛಾವಣಿ ಕುಸಿತ- ಸಾವನ್ನಪ್ಪಿದವರ ಸಂಖ್ಯೆ 23ಕ್ಕೆ ಏರಿಕೆ!..

- Advertisement -
- Advertisement -

ಗಾಝಿಯಾಬಾದ್: ಉತ್ತರ ಪ್ರದೇಶದ ಮುರಾದ್ ನಗರದ ಸ್ಮಶಾನವೊಂದರಲ್ಲಿ ಅಂತ್ಯಸಂಸ್ಕಾರಕ್ಕೆ ತೆರಳಿದ್ದವರ ಮೇಲೆ ಛಾವಣಿ ಕುಸಿದ ಘಟನೆ ನಿನ್ನೆ ವರದಿಯಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದುವರೆಗೆ 23 ಮಂದಿ ಸಾವನ್ನಪ್ಪಿದ್ದು ಛಾವಣಿ ಕೆಳಗೆ 40 ಕ್ಕೂ ಹೆಚ್ಚು ಮಂದಿ ನಿಂತಿದ್ದರು ಎಂದು ಹೇಳಲಾಗಿದ್ದು, ಗಾಯಗೊಂಡ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಮಶಾನದಲ್ಲಿ ಮೃತ ವ್ಯಕ್ತಿಯೋರ್ವರ ಸಂಸ್ಕಾರ ಮಾಡಲಾಗುತ್ತಿತ್ತು, ಮೃತರ ಸಂಬಂಧಿಕರು ಕಟ್ಟಡದ ಛಾವಣಿಯೊಂದರ ಅಡಿಯಲ್ಲಿ ನಿಂತಿದ್ದರು ಎನ್ನಲಾಗಿದೆ. ಈ ವೇಳೆ ಕಟ್ಟಡ ಕುಸಿದು 23 ಮಂದಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಿದ್ದು ಕಾರ್ಯಾಚರಣೆ ಪೂರ್ಣಗೊಂಡಿದೆ.

- Advertisement -

Latest News

error: Content is protected !!