- Advertisement -


- Advertisement -
ತೆಲಂಗಾಣ; ಬರೋಬ್ಬರಿ 9 ವರ್ಷಗಳ ಕಾಲ ಕೇವಲ 10 ರೂಪಾಯಿ ನಾಣ್ಯಗಳನ್ನು ಉಳಿತಾಯ ಮಾಡಿದ ತೆಲಂಗಾಣದ ರಾಮಕೃಷ್ಣ ಎಂಬುವವರು, ಈಗ ಅದೇ ನಾಣ್ಯಗಳನ್ನು ನೀಡಿ 1.10 ಲಕ್ಷ ರೂಪಾಯಿ ಮೌಲ್ಯದ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿಸಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ನಾಣ್ಯಗಳನ್ನು ರಾಮಕೃಷ್ಣ ಅವರು ಶೋರೂಮ್ ಗೆ ತಂದದ್ದು ನೋಡಿ ಬೇಸರ ಮಾಡಿಕೊಳ್ಳದ ಶೋರೂಮ್ ಸಿಬ್ಬಂದಿ, ಗ್ರಾಹಕನ ಆಸೆಯನ್ನು ಗೌರವಿಸಿ, ನಾಣ್ಯಗಳನ್ನು ಎಣಿಸಲು ಮುಂದಾದರು. ನಾಣ್ಯಗಳನ್ನು ಎಣಿಸುವುದಕ್ಕಾಗಿಯೇ ಸಿಬ್ಬಂದಿ ಸಾಕಷ್ಟು ಸಮಯ ವ್ಯಯಿಸಬೇಕಾಯಿತು. ಕೊನೆಗೂ ಎಣಿಕೆ ಪೂರ್ಣಗೊಂಡ ನಂತರ, ವ್ಯಕ್ತಿಗೆ ಅವರು ಇಷ್ಟಪಟ್ಟ ಹೊಚ್ಚ ಹೊಸ ಬೈಕ್ ಅನ್ನು ಹಸ್ತಾಂತರಿಸಲಾಯಿತು. ಸಣ್ಣ ಮತ್ತು ನಿರಂತರ ಉಳಿತಾಯದಿಂದಲೂ ದೊಡ್ಡ ಕನಸನ್ನು ನನಸಾಗಿಸಬಹುದು ಎಂಬುದಕ್ಕೆ ಈ ಘಟನೆ ಒಂದು ಉತ್ತಮ ಉದಾಹರಣೆಯಾಗಿದೆ.
- Advertisement -


